ಬೆಳ್ತಂಗಡಿ: ಶ್ರೀ ಗುರುದೇವ ಪಿಯು ಕಾಲೇಜಿನಲ್ಲಿ ಪಾಳೇಗಾರಿಕೆ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮುಂದಿರುವ ಸವಾಲುಗಳು ವಿಚಾರ ಸಂಕಿರಣ

Suddi Udaya

ಬೆಳ್ತಂಗಡಿ: ಡಿವೈಎಫ್ಐ ರಾಜ್ಯ ಸಮ್ಮೇಳನದ ಅಂಗವಾಗಿ ಹಾಗೂ ಗಣರಾಜ್ಯೋತ್ಸವ ಪ್ರಯುಕ್ತ ಡಿವೈಎಫ್ಐ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ಶ್ರೀ ಗುರುದೇವ ಪಿಯು ಕಾಲೇಜು ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಶ್ರೀಗುರುದೇವ ಪಿಯು ಕಾಲೇಜಿನಲ್ಲಿ ಪಾಳೆಗಾರಿಕೆ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮುಂದಿರುವ ಸವಾಲುಗಳು ಎಂಬ ಕುರಿತು ವಿಚಾರ ಸಂಕಿರಣ ನಡೆಯಿತು.


ಸಭೆಯ ಅದ್ಯಕ್ಷತೆ ಹಿರಿಯ ವಕೀಲರು, ಕಾರ್ಮಿಕ ನಾಯಕರು ಬಿ.ಎಂ.ಭಟ್ ವಹಿಸಿದ್ದರು. ಉದ್ಘಾಟನೆಯನ್ನು ಬೆಳ್ತಂಗಡಿಯ ಮಾಜಿ ಶಾಸಕ ಕೆ .ವಸಂತ ಬಂಗೇರ ಅವರ ಅನುಪಸ್ಥಿತಿಯಲ್ಲಿ ಕಾಲೇಜು ಪ್ರಾಂಶುಪಾಲರು ಸುಕೇಶ್ ಕುಮಾರ್ ಅವರು ನೆರವೇರಿಸಿದರು. ವಿಚಾರ ಮಂಡನೆಯನ್ನು ಹಿರಿಯ ವಕೀಲರು, ಚಿಂತಕರೂ ಆದ ಸುದೀರ್ ಕುಮಾರ್ ಕೊಪ್ಪ, ಮತ್ತು ಸಮಾಜ ಚಿಂತಕರು ಡಿ.ವೈ.ಎಫ್.ಐ. ರಾಜ್ಯ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ನೆರವೇರಿಸಿದರು., ಪತ್ರಕರ್ತ ವಿಠಲ ಮಲೆಕುಡಿಯ, ಮತ್ತು ಎಸ್.ಎಫ್.ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಿನುಶ ರಮಣ ಪ್ರತಿಕ್ರಿಯೆ ಮಿಡಿದರು.

ಮನೊಹರ ಕುಮಾರ್ ಇಳಂತಿಲ ವಕೀಲರು, ಸ್ವಾಗತಿಸಿದರು. ಉಪ ಪ್ರಾಂಶುಪಾಲ ಧನ್ಯವಾದವಿತ್ತರು. ಸಭೆಯ ಬಳಿಕ ಪ್ರಶ್ನೋತ್ತರ ನಡೆಯಿತು. ಸಭೆಯ ಪ್ರಾರಂಭದಲ್ಲಿ ಈಶ್ವರಿ, ಜಯಶ್ರಿ, ಅಭಿಶೇಕ್, ಶ್ಯಾಮರಾಜ್ ತಂಡ ಸಂವಿಧಾನ ಸದಾಶಯ ಹಾಡು ಹಾಡಿದರು.

Leave a Comment

error: Content is protected !!