25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ಫೆ.17, 18, 19ರಂದು ಮಾರಿಗುಡಿ ಮೈದಾನದಲ್ಲಿ ‘ಬೆಳ್ತಂಗಡಿ ಸಂಭ್ರಮ’

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ಬೆಳ್ತಂಗೆಡಿ ಸಂಭ್ರಮ ಕಾರ್ಯಕ್ರಮ ಫೆ.17, 18, 19ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಜರುಗಲಿದೆ ಎಂದು ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಯ ಗೌರವಾಧ್ಯಕ್ಷ ರೋಶನ್ ಸ್ವೀಕ್ವೇರಾ ಹೇಳಿದರು.

ಅವರು ಜ.29ರಂದು ಸುವರ್ಣ ಆರ್ಕೇಡ್‌ನ ಸಂಘಟನೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಎಸ್.ಎಸ್ ಇವೆಂಟ್ಸ್ ಮ್ಯಾನೇಜ್‌ಮೆಂಟ್ ಪುತ್ತೂರು ಇವರ ಪ್ರಯೋಜಕತ್ವದಲ್ಲಿ ಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಬೆಳ್ತಂಗಡಿ ಸಂಭ್ರಮದಲ್ಲಿ 100 ಸ್ಟಾಲ್‌ಗಳು, ಇರಲಿದ್ದು, ವಾಹನ ಮೇಳ, ಕೃಷಿ ಮೇಳ, ಸಾವಯವ ಉತ್ಪನ್ನ ಮೇಳ, ಸುಮಾರು 60ರಷ್ಟು ಖಾದ್ಯ ಮೇಳ ಇರಲಿದೆ. ಜೊತೆಗೆ ಸಂಜೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಈ ಹಬ್ಬದಲ್ಲಿ ಸ್ಟಾಲ್ ಹಾಕುವುದಾದರೆ ತಾಲೂಕಿನವರಿಗೆ ಆಧ್ಯತೆ ನೀಡಲಾಗುವುದು. ಸ್ಟಾಲ್ ಹಾಕಲು ಆಸಕ್ತಿ ಇರುವವರು ಶಿವಪ್ರಸಾದ್ (7259406154), ದೀಪಕ್ ಜಿ. (9901947498) ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ದೀಪಕ್ ಜಿ. ಅವರು ಮಾತನಾಡಿ, ರಾಜಕೇಸರಿ ಸಂಘಟನೆ ಆಶಕ್ತರಿಗೆ ಸಹಾಯ ಮಾಡುತ್ತಾ ಬರುತ್ತಿದ್ದು, ಆ ದಿನ 547ನೇ ಕಾರ್ಯಕ್ರಮವಾಗಿ ಎರಡು ಮಂದಿಗೆ ವಿಕಲಚೇತನರಿಗೆ ಗಾಳಿಕುರ್ಚಿ ನೀಡುವ ಕಾರ್ಯಕ್ರಮ ಹಾಗೂ ತಾಲೂಕಿನ ಶಾಲಾ ಶಿಕ್ಷಕರಿಗಾಗಿ ಜ.18 ಅದಿತ್ಯವಾರ ಒಳಂಗಾಣ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಸ್ ಇವೆಂಟ್ಸ್ ಮ್ಯಾನೇಜ್‌ಮೆಂಟ್‌ನ ಮಾಲಕ ಶಿವಪ್ರಕಾಶ್ ಪುತ್ತೂರು, ಅಚಲ್ ವಿಟ್ಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ಪತ್ರಕತ೯ರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಬಿಡುಗಡೆಗೊಳಿಸಿದರು.

Related posts

ಅರುವ ನಮ ಮಾತೆರ್ಲ ಒಂಜೇ ಕಲಾ ತಂಡದ ಪದಾಧಿಕಾರಿಗಳ ಆಯ್ಕೆ

Suddi Udaya

ಅರಸಿನಮಕ್ಕಿ ಮತ್ತೆ ಕಾಡಾನೆ ದಾಳಿ

Suddi Udaya

ಚಾರ್ಮಾಡಿಯಲ್ಲಿ ಬಿರುಸಿನ ಮತದಾನ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಪಟ್ರಮೆ ಪಟ್ಟೂರು ಶ್ರೀರಾಮ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Suddi Udaya

ಕಾರುಣ್ಯ ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!