April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಹೆಪಾಟೈಟಿಷ್ ಬಿ” ಎಂಬ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತೆಂಕಕಾರಂದೂರಿನ ಯುವಕ ಪತ್ನಿ, ತಾಯಿ, 2 ಚಿಕ್ಕ ಮಕ್ಕಳೊಂದಿಗಿರುವ ಮನೆಯ ಆಧಾರಸ್ತಂಭ ಗುರುರಾಜ್ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯಕಟ್ಟೆ ಗಿಂಡಾಡಿಯ ನಿವಾಸಿ,ಕ್ರೀಡಾ ಪ್ರೋತ್ಸಾಹಕ, ಬಳಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುರಾಜ್ ಹೆಗ್ಡೆಯವರು ಸುಮಾರು 2ವರ್ಷದಿಂದ “ಹೆಪಾಟೈಟಿಷ್ ಬಿ” ಎಂಬ ಲಿವರ್ ನ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಮಂಗಳೂರಿನ ಎಜೆ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಚಿಕಿತ್ಸೆಗಾಗಿ ಈಗಾಗಲೇ ಸುಮಾರು 9ಲಕ್ಷದಷ್ಟು ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಸುಮಾರು 40ಲಕ್ಷದಷ್ಟು ಹಣದ ಅವಶ್ಯಕತೆ ಇದ್ದು,ಇನ್ನು 15 ದಿನದ ಒಳಗೆ ದೊಡ್ಡ ಮಟ್ಟದ ಚಿಕಿತ್ಸೆ ಆರಂಭ ಮಾಡಬೇಕೆಂದು ವೈದ್ಯರು ತಿಳಿಸಿರುತ್ತಾರೆ.

ಗುರುರಾಜ್ ಹೆಗ್ಡೆಯವರು ಮನೆಯ ಆಧಾರಸ್ತOಭ ವಾಗಿದ್ದು, ತಾಯಿ, ಹೆಂಡತಿ ಮತ್ತು 2ಚಿಕ್ಕ ಮಕ್ಕಳು ಜೊತೆಗಿದ್ದಾರೆ. ತಾಯಿಯು ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಅಷ್ಟೊಂದು ದೊಡ್ಡ ಪ್ರಮಾಣದ ಹಣಕಾಸು ಒಗ್ಗೂಡಿಸಲು ಸಾಧ್ಯವಾಗದ ಕಾರಣ ಈಗ ಅವರು ದಾನಿಗಳ ಮೋರೆ ಹೋಗಿದ್ದಾರೆ.ಸಹೃದಯಿ ದಾನಿಗಳು ಗುರುರಾಜದ ಹೆಗ್ಡೆಯವರ ಚಿಕಿತ್ಸೆಗೆ ನೆರವಾಗಿ ಮೊದಲಿನಂತಾಗಲು ಸಹಕರಿಸೋಣ. ಸಹಾಯ ಮಾಡುವವರು ಈ ನಂಬರ್ ಸಂಪರ್ಕಿಸಿರಿ:9845301366

Name and address: Gururaj Hegde
C/o : late sundara hegde
280/1 Gindady house
Belthangady 574217 india
Bank Name: Karnataka bank Ltd
Branch: Aladangady.
A/c no :0152500101703601
IFSC code: KARB0000015
MICR code:575052503

Phone pay or Google pay
No : 9845301366

Related posts

ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಪ್ರಕ್ರಿಯೆಗೆ ಇಲಾಖೆಯಿಂದ ಕ್ರಮ: ತಾಲೂಕಿನಲ್ಲಿ 7,024 ಬಿಪಿಎಲ್ ಪಡಿತರ ಚೀಟಿಗಳ ಪರಿಶೀಲನೆ: 53 ಕುಟುಂಬಗಳ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆ

Suddi Udaya

ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರಿಂದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ ಪ್ರೌಢ ಶಾಲೆ ಹಾಗೂ ಕಾಲೇಜಿಗೆ ನುಗ್ಗಿದ ಕಳ್ಳರು: ಸಿಸಿ ಕ್ಯಾಮರ ಹಾಗೂ ದಾಖಲೆ ಪತ್ರಗಳಿಗೆ ಹಾನಿ

Suddi Udaya

ಬೆಳ್ತಂಗಡಿ: ಎಸ್.ಎನ್. ಕಂಪ್ಯೂಟರ್ಸ್ ಮತ್ತು ಸೈಬರ್ ಕೇಂದ್ರ ಸ್ಥಳಾಂತರಗೊಂಡು ಪುನರಾರಂಭ

Suddi Udaya

ಅಗ್ನಿವೀರ್‌ ತರಬೇತಿ ಪೂರೈಸಿ ಇಂದು ಊರಿಗೆ ಆಗಮಿಸಲಿರುವ ರೆಖ್ಯದ ರಂಜಿತ್

Suddi Udaya

ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರ ರಚನೆ

Suddi Udaya
error: Content is protected !!