ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಪಟಾಕಿ ತಯಾರಿಕೆ ವೇಳೆ ಜ.28 ರಂದು ಸಂಜೆ ಸ್ಪೋಟ ನಡೆದಿದ್ದು. ಈ ವೇಳೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಕಾಡುತ್ತಿವೆ, ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಕಾರ್ಮಿಕರ ದೇಹಗಳು ಚಿದ್ರ ಚಿದ್ರಾ ಗಳಾಗಿವೆ. ಹಾಗೂ ಅಲ್ಲಿ ಸ್ಫೋಟಗೊಂಡ ಕಟ್ಟಡ ಮತ್ತು ಕಟ್ಟಡದ ಹಿಂದೆ ಇರುವ ಕಲ್ಲಿನಿಂದ ನಿರ್ಮಿಸಿದ ಕಪೌಂಡ್ ಚಿದ್ರಾ ಚಿದ್ರಾಗೊಂಡಿದ್ದು ಮತ್ತು ಸುಮಾರು ಮೂರು ಕಿಲೋ ಮೀಟರ್ ವ್ಯಾಪ್ತಿಗೆ ಸ್ಫೋಟಕದ ಕಂಪನಗೊಂಡಿದ್ದು ಹಾಗೂ ಸ್ಫೋಟಕದ ತೀವ್ರತೆಗೆ ಸುಮಾರು ಹದಿನೈದಕ್ಕಿಂತ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದು ಹಾನಿಗೊಳಗಾಗಿವೆ. ಹಾಗೂ ಸ್ಫೋಟಕದ ಶಬ್ದ ಹತ್ತು ಕಿಲೋ ಮೀಟರ್ ವರೆಗೆ ಕೇಳಿಸಿರುತ್ತದೆ. ಇದು ಕೇವಲ ಪಟಾಕಿಯಿಂದ ನಡೆದಿರಳು ಸಾಧ್ಯವಿಲ್ಲ ಇದರ ತೀವ್ರತೆಯನ್ನು ಗಮನಿಸಿದಾಗ ಗ್ರಾನೈಟ್ ಮಾದರಿಯ ಸ್ಫೋಟಕ ತಯಾರಾಗುತ್ತೀದೆ ಎಂದು ಅನುಮಾನ ಹುಟ್ಟಿಕೊಂಡಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ತನಿಖಾ ಸಂಸ್ಥೆಯ ಮುಖಾಂತರ ಹೆಚ್ಚಿನ ತನಿಖೆಯನ್ನು ನಡೆಸುವಂತೆ ವೇಣೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ವೇಣೂರು ಪೊಲೀಸರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಯೋಜಕ ನಿರಂಜನ್, ಜಯ ಪ್ರಸಾದ್, ಸಂತೋಷ್ ನಂದಿಬೆಟ್ಟ, ಗೋಪಾಲ್ ಶೆಟ್ಟಿ, ಧನಂಜಯ ಕುಲಾಲ್, ಜಗದೀಶ್ ಚಂದ್ರ, ಯಾದವ್ ಕೋಟ್ಯಾನ್ ಉಪಸ್ಥಿತರಿದ್ದರು.