ಬೆಳ್ತಂಗಡಿ: ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವು ಫೆ. 17 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು. ಈ ಕಾರ್ಯಕ್ರಮದ ಪೂರ್ವ ತಯಾರಿ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾಗಿ ನಾರಾವಿ ಧರಣೇಂದ್ರ ಕುಮಾರ್, ಕಣಿಯೂರು ಕೆ.ಶಾಹುಲ್ ಹಮೀದ್ , ಅಳದಂಗಡಿ ಶೇಖರ್ ಕುಕ್ಕೆಡಿ, ಕುವೆಟ್ಟು ಪದ್ಮನಾಭ ಸಾಲಿಯಾನ್ ಮಾಲಾಡಿ, ಲಾಯಿಲ ನಾರಾಯಣ ಗೌಡ ದೇವಸ್ಯ, ಉಜಿರೆ ಕೆ ನಮಿತಾ ಪೂಜಾರಿ , ಧರ್ಮಸ್ಥಳ ಪಿ.ಟಿ ಸೆಬಾಸ್ಟಿಯನ್ ,ಇವರನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.
ತಾಲೂಕು ಪಂಚಾಯತ್ ಉಸ್ತುವಾರಿಗಳಾಗಿ ಸುಭಾಷ್ ಚಂದ್ರ ರೈ ಶಿರ್ಲಾಲು, ಪಡಂಗಡಿ ನಿತೀಶ್ ಹೆಚ್ ಕುಕ್ಕೇಡಿ, ನಾರಾವಿ ರವೀಂದ್ರ ಪೂಜಾರಿ ಬಾಂದೊಟ್ಟು, ವೇಣೂರು ಸತೀಶ್ ಹೆಗ್ಡೆ ಬಜಿರೆ, ಹೊಸಂಗಡಿ ಹರಿಪ್ರಸಾದ್ ಹೊಸಂಗಡಿ, ಅಂಡಿಂಜೆ ಶ್ರೀಮತಿ ವಂದನಾ ಭಂಡಾರಿ, ಕುವೆಟ್ಟು ಮಹಮ್ಮದ್ ರಫೀಕ್, ಕಳಿಯ ಪ್ರವೀಣ್ ಗೌಡ ಕೊಯ್ಯೂರು, ಮಾಲಾಡಿ ವಿನ್ಸೆಂಟ್ ಡಿಸೋಜ, ಉಜಿರೆ ರಜತ್ ಗೌಡ ಮಾಚಾರ್, ಮುಂಡಾಜೆ ನಾಮ್‌ದೇವ್ ರಾವ್ ಮುಂಡಾಜೆ, ಚಾರ್ಮಾಡಿ ಯಶೋಧರ್ ಚಾರ್ಮಾಡಿ, ನೆರಿಯ ಬಿ.ಅಶ್ರಫ್ ನೆರಿಯ, ಧರ್ಮಸ್ಥಳ ಹರೀಶ್ ಸುವರ್ಣ ಕನ್ಯಾಡಿ, ಕೊಕ್ಕಡ ಪ್ರಮೋದ್ ರೈ ರೆಖ್ಯ, ಕಳೆಂಜ ಶ್ರೀಧರ್ ಎಸ್ ಉಗ್ರಾಜೆ, ಇಳಂತಿಲ ಇಸುಬು ಯು.ಕೆ, ತಣ್ಣೀರುಪಂತ ಜಯವಿಕ್ರಮ್ ಕಲ್ಲಾಪು, ಉರುವಾಲು ಶ್ರೀಮತಿ ಸುಮತಿ ಶೆಟ್ಟಿ ಪದ್ಮುಂಜ, ಲಾಯಿಲ ಮಹಮ್ಮದ್ ಅಲಿ, ನಡ ನಾಣ್ಯಪ್ಪ ಪೂಜಾರಿ ಗುರಿಪಳ್ಳ, ಮಿತ್ತಬಾಗಿಲು ನೇಮಿರಾಜ್ ಕಿಲ್ಲೂರು ಇವರನ್ನು ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಚಾಲಕರಾಗಿ ಡಿ.ಜಗದೀಶ್ ಇವರನ್ನು ನೇಮಕ ಮಾಡಲಾಗಿದೆ