ವೇಣೂರು: ಭಗವಾನ್ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ಫೆ 22 ರಿಂದ ಮಾ 1ರವರೆಗೆ ನಡೆಯಲಿದ್ದು ಆಹಾರ ತಯಾರಿಕೆ ಸ್ಥಳದಲ್ಲಿ ಚಪ್ಪರ ಮುಹೂರ್ತವು ಮೂಡಬಿದ್ರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಫೆ.1 ರಂದು ನಡೆಯಿತು.
ಬೆಟ್ಟದ ಪುರೋಹಿತರಾದ ಚಂದ್ರನಾಥ ಇಂದ್ರ ರವರು ಪೌರೋಹಿತ್ಯದಲ್ಲಿ ಚಪ್ಪರ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಮಹಾ ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ,ಕೋಶಾಧಿಕಾರಿ ಜಯರಾಜ್ ಕಂಬಳಿ, ಪ್ರಮುಖರಾದ ಪ್ರವೀಣ್ ಅಜ್ರಿ,ಮಹಾವೀರ್ ಮೂಡುಕೋಡಿ, ಚಂದ್ರಪ್ರಭ ಜೈನ್, ನವೀನ್ ಚಂದ್ ಬಳ್ಳಾಳ್, ಹಂಡೇಲು ಧನಕೀರ್ತಿ ಬಲಿಪ,ಭರತ್ ರಾಜ್ ಅಜ್ರಿ, ಶಂಭಾಷಿನಿ, ಅಶ್ವಿನಿ ಪ್ರವೀಣ್ ಕುಮಾರ್, ನಿತಿನ್ ಬೊಳ್ಜಾಲು, ವೃಷಭರಾಜ ಅಜ್ರಿ,ಹರ್ಷೇಂದ್ರ ಕುಮಾರ್, ಶರ್ಮಿತ್ ಕುಮಾರ್,ವೈ ಜಯರಾಜ್, ಶಶಿಧರ ಕತ್ತೋಡಿ, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ಮೂಡಬಿದ್ರೆ ಆರ್.ಕೆ ಎಂಟರ್ಪ್ರೈಸಸ್ ಮತ್ತು ಎಂ.ಎಂ.ಸಿ ಕಾರ್ಕಳ ಪೆಂಡಲ್ ನಿರ್ಮಾಣ ಕೆಲಸ ನಡೆಯುತ್ತಿದೆ.ಪಾಕ ವ್ಯವಸ್ಥೆಗೆ ರಾಜೇಂದ್ರ ಜೈನ್ ಶಿರ್ತಾಡಿ ವ್ಯವಸ್ಥೆ ಕಲ್ಪಿಸಲಿದ್ದಾರೆ.