31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಶಿಪಟ್ಣ ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

ಕಾಶಿಪಟ್ಣ: ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತ್ ಕಾಶಿಪಟ್ಣ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾವು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ಆಗಮಿಸಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್.ಕೆ.ಕಾಶಿಪಟ್ಟ ಇವರು ಹೂ ಮಾಲೆ ಹಾಕುವ ಮುಖಾಂತರ ಜಾಥಾವನ್ನು ಸ್ವಾಗತಿಸಿದರು. ಚೆಂಡೆ, ಕೊಂಬು, ವಾದ್ಯಗಳ ಮುಖಾಂತರ ಮೆರವಣಿಗೆಯೊಂದಿಗೆ ಕಛೇರಿಗೆ ಜಾಥಾ ಆಗಮಿಸಿತು. ನಾಡಗೀತೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷರು, ಸದಸ್ಯರುಗಳು, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಮಾಜಿ ತಾಲೂಕು ಪಂಚಾಯತ್ ಸದಸ್ಯರು ಚಂದು ಎಲ್, ರಮೇಶ್ ಆರ್ ಸಂಚಾಲಕರು DSS (A) ಬೆಳ್ತಂಗಡಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ.ಕೆ.ರಾಜು ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಪ್ರವೀಣ್ ಗಿಲ್ಬರ್ಟ್ ಪಿಂಟೋ ರವರು, ಹೊಸಂಗಡಿ ಇಂದಿರಾ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಧರ ಶೆಟ್ಟಿ, ಮುಂಡಾಜೆ ವಸತಿ ಶಾಲೆಯ ಪ್ರಾಂಶುಪಾಲರು, ಕಾಶಿಪಟ್ಣ ಪ್ರೌಢಶಾಲಾ ಅಧ್ಯಾಪಕರು, ಕೇಳದ ಪೇಟೆ ಶಾಲೆಯ ಅಧ್ಯಾಪಕರು, ನರೇಗಾ ತಾಲೂಕು ಐಇಸಿ ಸಂಯೋಜಕರಾದ ಶ್ರೀಮತಿ ವಿನಿಷಾ, ತಾಲೂಕು ವಿವಿಧ ಸಂಘಟನೆಗಳ ಮುಖಂಡರು, ಎನ್ ಆರ್ ಎಲ್ ಎಂ ಸಂಘದ ಅಧ್ಯಕ್ಷರು .ಎಲ್ ಸಿ ಆರ್ ಪಿ. ಎಮ್ ಬಿ ಕೆ. ಸದಸ್ಯರು, ಗ್ರಾಮದ ಗಣ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಾಶಿಪಟ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ ಇವರು ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಕಾರಿ ಪ್ರೌಢಶಾಲಾ ಅಧ್ಯಾಪಕರು ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು. ಸಂವಿಧಾನ ಕುರಿತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ಬಹುಮಾನ ನೀಡಿ ಅಭಿನಂದಿಸಿದರು. ಮಂಗಳೂರಿನ ಕಲಾ ತಂಡದವರು ಜಾಗೃತಿ ಗೀತೆ ಮತ್ತು ನಾಟಕ ಪ್ರದರ್ಶಿಸಿದರು. ಡಾ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಸರಕಾರಿ ಪ್ರೌಢಶಾಲಾ ಅಧ್ಯಾಪಕ ದೇವದಾಸ ಇವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

Related posts

ನಿಡ್ಲೆ: ಶ್ರೀ ದುರ್ಗಾ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

Suddi Udaya

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಆರೋಪಿ ನಾರಾವಿಯ ಯುವಕನಿಗೆ ನ್ಯಾಯಾಂಗ ಬಂಧನ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ಉರುವಾಲು:32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಬಜಿರೆ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕ ಕಟ್ಟಡದ ಶಿಲಾನ್ಯಾಸವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

Suddi Udaya
error: Content is protected !!