September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

ಚಾರ್ಮಾಡಿ ಗ್ರಾಮ‌ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಹಂತದ ಗ್ರಾಮ‌ಸಭೆಯು ಪಂಚಾಯತ್ ಅಧ್ಯಕ್ಷೆ ಶಾರಾದ ಎ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಫೆ.7 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತ ಇಲಾಖೆಯ ಸಹಾಯಕ ನಿರ್ದೇಶಕ ಜೋಸೆಫ್ ಗ್ರಾಮ ಸಭೆಯನ್ನು ಮುನ್ನಡೆಸಿದರು.

ಗ್ರಾಮಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ನೀಲು, ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮರವರು ಸ್ವಾಗತಿಸಿದರು. ಕಾರ್ಯದರ್ಶಿಯವರು ಅನುಪಾಲನ ವರದಿಯನ್ನು ಸಭೆಯ ಮುಂದಿಟ್ಟರು.

ಕುಡಿಯುವ ನೀರು ಸರಿಯಾಗಿ ಸರಬುರಾಜು ಆಗುತ್ತಿಲ್ಲ. ಕರೆಂಟ್ ಇಲ್ಲದಿದ್ದರೆ ನೀರು ಬರುವಾಗ ಲೇಟ್ ಆಗುತ್ತಿದೆ. ಕಳೆದ ಮೂರು ಅವಧಿಯಿಂದ ನೀರಿನ ಸಮಸ್ಯೆ ಬಗ್ಗೆ ತಿಳಿಸಿದರು. ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಗ್ರಾಮಸ್ಥರು ಪಂಚಾಯತ್ ನ್ನು ಪ್ರಶ್ನಿಸಿದರು. ಕೂಡಲೇ ಸರಿಪಡಿಸುವ ಭರವಸೆಯನ್ನು ಪಿಡಿಓ ನೀಡಿದರು.

ರಸ್ತೆಯಲ್ಲಿ ಬೀದಿ ದೀಪ ಅಳವಡಿಸಿದೆ ಇರುವುದರಿಂದ ಬೆಳಿಗ್ಗೆ ವಾಕಿಂಗ್ ಹೋಗುವಾಗ ಕಷ್ಟವಾಗುತ್ತಿದೆ. ಬೀದಿ ದೀಪ ವಿಸ್ತರಿಸುವಂತೆ ಗ್ರಾಮಸ್ಥರೊರ್ವರು ಒತ್ತಾಯಿಸಿದರು.

ಸರಕಾರಿ ಆಸ್ಪತ್ರೆಗೆ ಸಂಚರಿಸುವ ರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು ಕೂಡಲೇ ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಚಾರ್ಮಾಡಿ ಗ್ರಾಮ ಪಂಚಾಯತ್ ವತಿಯಿಂದ ಸ್ಥಳಿಯ 11 ಅಂಗನವಾಡಿ ಕೇಂದ್ರಗಳಿಗೆ ತಲಾ 10 ರಂತೆ ಮಕ್ಕಳು ಕುಳಿತುಕೊಳ್ಳುವ ಚಯರ್ ನೀಡಲಾಯಿತು.

Related posts

ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ಡಿಸ್ಕೌಂಟ್, ಸೀರೆಗಳಿಗೆ ಕೇವಲ ರೂ 99

Suddi Udaya

ಅಳದಂಗಡಿ ಬಡಗಕಾರಂದೂರು ಪ್ರಗತಿ ಬಂಧು ಎ’ಬಿ ಒಕ್ಕೂಟದ ಅಧ್ಯಕ್ಷರುಗಳಾಗಿ ಹರೀಶ್ ಸಾಲಿಯನ್, ಕೃಷ್ಣಪ್ಪ ಪೂಜಾರಿ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾಗಿ ಆಶಾ ಹರೀಶ್ ಆಯ್ಕೆ

Suddi Udaya

ಶಿಶಿಲ ಪರಿಶಿಷ್ಟ ಪಂಗಡ ಕಾಲೋನಿಗೆ ಪೊಲೀಸ್ ಅಧಿಕಾರಿಗಳ ಭೇಟಿ: ಸೈಬರ್ ಅಪರಾಧ, ಪೋಕ್ಸೋ ವಂಚನೆಗಳ ಬಗ್ಗೆ ಜಾಗೃತಿ

Suddi Udaya

ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿ ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

Suddi Udaya

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ”ಪ್ರಚಲಿತ ಉತ್ತಮ ಉತ್ಪಾದನಾ ಅಭ್ಯಾಸಗಳು” ನಿಯಂತ್ರಣ ವ್ಯವಹಾರಗಳ ಕುರಿತಾದ ವಿಚಾರಗೋಷ್ಠಿ

Suddi Udaya

ಕುಣಿತ ಭಜನಾ ಸ್ಪರ್ಧೆ: ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಪ್ರಥಮ

Suddi Udaya
error: Content is protected !!