April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ಇಲ್ಲಿಯ ಭಕ್ತರಿಗೆ ದೇವಸ್ಥಾನದ ಮಧ್ಯಾಹ್ನದ ಪೂಜೆಯನ್ನು ದೂರದೂರಿನಿಂದ ಯೂಟ್ಯೂಬ್ ಮೂಲಕ ನೇರವಾಗಿ ವೀಕ್ಷಿಸಲು ಒಂದು ವಿನೂತನ ವ್ಯವಸ್ಥೆಯೊಂದನ್ನು ವ್ಯವಸ್ಥಾಪನಾ ಸಮಿತಿಯ ಮಾಡಿಕೊಟ್ಟಿದೆ.

ರಾಘವೇಂದ್ರ ನಾಯಕ್‌


ಫೆ.3 ರಂದು ಈ ಯೋಜನೆಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್‌ರವರು ಚಾಲನೆ ನೀಡಿ ಮಾತನಾಡಿ ನಮ್ಮ ದೇವಸ್ಥಾನದ ಹಲವಾರು ಭಕ್ತರು ದೂರದ ಊರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ಅವರ ಹೆಸರಿನಲ್ಲಿ ನಿತ್ಯ ಪೂಜೆ ಸೇವೆ ಮಾಡಿಸುತ್ತಾರೆ. ಆದರೆ ಆ ದಿನ ಕೆಲವರಿಗೆ ಬರಲು ಅಸಾಧ್ಯವಾಗುತ್ತದೆ. ಇದನ್ನು ಮನಗಂಡು ಅವರ ಹೆಸರಲ್ಲಿ ನಡೆಯುವ ಪೂಜೆಯನ್ನು ವೀಕ್ಷಿಸಲು ಒಂದು ವ್ಯವಸ್ಥೆಯನ್ನು ಮಾಡಬೇಕೆಂದು ಅಲೋಚಿಸಿ ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.

ದೇವಸ್ಥಾನದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ವ್ಯವಸ್ಥಾಪನಾ ಸಮಿತಿಯು ಯುಟ್ಯೂಬ್ ಲಿಂಕ್ ಪ್ರಾರಂಭಿಸಿದ್ದು ಮಧ್ಯಾಹ್ನ 12.30 ಕ್ಕೆ ಯೂಟ್ಯೂಬ್ ಲಿಂಕ್ ಆನ್ ಆಗಲಿದ್ದು, ಪೂಜೆ ಕೊನೆಗೊಳ್ಳುವ ತನಕ ಇರುತ್ತದೆ. ಇದರಿಂದ ನಿತ್ಯಪೂಜೆ ಮಾಡಿಸುವ ಭಕ್ತರು ದೂರದೂರಿನಲ್ಲಿದ್ದರು ತಮ್ಮ ಹೆಸರಿನಲ್ಲಿ ನಡೆಯುವ ನಿತ್ಯ ಪೂಜೆಯನ್ನು ವೀಕ್ಷಿಸಬಹುದಾಗಿದೆ. https://youtube.com/live/M-1N_CEYjbQ?feature=share

Related posts

ಬೆಳ್ತಂಗಡಿಯ ಇಬ್ಬರು ವಕೀಲರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬೆಳ್ತಂಗಡಿ ತಾಲೂಕಿಗೆ ಭೇಟಿ

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ಪುದುವೆಟ್ಟು ವಿ. ಹಿಂ. ಪ. ಭಜರಂಗದಳ ವತಿಯಿಂದ ಶ್ರೀ ವನದುರ್ಗ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಬೆಳ್ತಂಗಡಿ: ವಕೀಲರ ಸಂಘದ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

Suddi Udaya

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!