ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ- ಬೆಳ್ತಂಗಡಿ ಟಿಬಿ ಕ್ರಾಸ್ ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ

ಬೆಳ್ತಂಗಡಿ- ಉಜಿರೆ ಟಿ.ಬಿ ಕ್ರಾಸ್ ಹತ್ತಿರ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬಳಿ ನೂತನವಾಗಿ ಪ್ರಾರಂಭಿಸಿದ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಇದರ ಪ್ರಾರಂಬೋತ್ಸವವು ಫೆ.8 ರಂದು ನಡೆಯಿತು.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ನೆರವೇರಿಸಿ ಶುಭ ಕೋರಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಗಂಗಾಧರ ಗೌಡ ನೇರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ (ಎ.ಸಿ.ಸಿ.ಐ) ಸೆಂಟರ್ ಅಧ್ಯಕ್ಷ ಜಗದೀಶ್ ಪ್ರಸಾದ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿ ಕೆ. ವಿದ್ಯಾಕುಮಾರ್ ಕಾಂಚೋಡ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರ್ ಪ್ರಮೋದ್ ಕಾಮತ್ ಉಜಿರೆ, ಉಜಿರೆ ದಿಶಾ ಪುಡ್ ಕಾರ್ನರ್ ಮಾಲಕ ಅರುಣ್ ಕಾರ್ನರ್, ಉಜಿರೆ ಹೆಬ್ಬಾರ್ಸ್ ಹೆಲ್ತ್ ವೇ ಮಾಲಕರಾದ ಕಿರಣ್ ಹೆಬ್ಬಾರ್,ಶುಭಂ ಸಂಸ್ಥೆಯ ಸುನೀಲ್ ಕುಮಾರ್ ಹಾಗೂ ಸಂಸ್ಥೆಯ ಮಾಲಕರ ಬಂಧು ಮಿತ್ರರು, ರಾಜಸ್ಥಾನ ಬಂಧುಗಳು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಕಮಲೇಶ್ ಚೌಧರಿ , ಜಿತೇಂದ್ರ ಚೌಧರಿ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

ಶ್ರೀದುರ್ಗಾ ಟೆಕ್ಸ್ ಟೈಲ್ಸ್ ಸಂಸ್ಥೆಯ ಮಾಲಕ ಮೋಹನ್ ಚೌಧರಿ ಪ್ರಾಸ್ತಾವಿಕ ಮಾತನಾಡಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Related posts

ಶಿರ್ಲಾಲು ಬಳಂಜ ಕಾಡು ಕೋಣಗಳ ಸಂಚಾರ

Suddi Udaya

ನಾಪತ್ತೆಯಾಗಿದ್ದ ತೋಟತ್ತಾಡಿ ಯುವಕನ ಮೃತದೇಹ ಅಣಿಯೂರು ನದಿಯಲ್ಲಿ ಪತ್ತೆ

Suddi Udaya

ಬಂದಾರು: ಪೆರ್ಲ-ಬೈಪಾಡಿ ನಿವಾಸಿ ಶತಾಯುಷಿ ಲಕ್ಷ್ಮೀ ನಿಧನ

Suddi Udaya

ನಿಡ್ಲೆ ಅಗ್ರಿಲೀಫ್ ಸಂಸ್ಥೆಗೆ ಝೆಡ್ ಬೆಳ್ಳಿ ಪ್ರಮಾಣ ಪತ್ರ

Suddi Udaya

ಕಕ್ಕಿಂಜೆ: ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದರಸ ನೂತನ ಆಡಳಿತ ಸಮಿತಿ ರಚನೆ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ

Suddi Udaya
error: Content is protected !!