23.4 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಯನ್ ಹೆರಾಲ್ಡ್ ತಾವ್ರೋ ರವರ ಪ್ರಾಂತ್ಯ ಸಮ್ಮೇಳನಕ್ಕೆ : ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹಾಗೂ ತುಳುನಾಡ ಮಾಣಿಕ್ಯ ನಟ ಅರವಿಂದ ಬೋಳಾರ್

ಬೆಳ್ತಂಗಡಿ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಪ್ರಾಂತ್ಯ 12ರ ಪ್ರಾಂತ್ಯ ಅಧ್ಯಕ್ಷ ಲಯನ್ ಹೆರಾಲ್ಡ್ ತಾವ್ರೋ ಅವರ “ನಿನಾದ” ಪ್ರಾಂತ್ಯ ಸಮ್ಮೇಳನ ಫೆ. 10 ರಂದು ಅಪರಾಹ್ನ 3.30 ಕ್ಕೆ ಸೃಷ್ಟಿ ಗಾರ್ಡನ್ ಕಡಲಕೆರೆ ವೀರರಾಣಿ ಅಬ್ಬಕ್ಕ ನಗರ ಒಂಟಿಕಟ್ಟೆ ಮೂಡುಬಿದ್ರೆಯಲ್ಲಿ ನಡೆಯಲಿದೆ.

ಲಯನ್ಸ್ ಅಂತರಾಷ್ಟ್ರೀಯ ನಿರ್ದೇಶನದಂತೆ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹೆರಾಲ್ಡ್ ತಾವ್ರೋ ನಡೆಸಲಿದ್ದಾರೆ. ಪ್ರಾಂತ್ಯದ ಪ್ರಥಮ ಮಹಿಳೆ ಲಯನ್ ಪ್ರೆಸಿಲ್ಲ ತಾವ್ರೋ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದರು ಹಾಗೂ ಹಿರಿಯ ಕನ್ನಡ ಚಲನಚಿತ್ರ ನಟರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಗೌರವ ಉಪಸ್ಥಿತಿ ಖ್ಯಾತ ತುಳು ರಂಗಭೂಮಿ ಕಲಾವಿದರು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಉಪಸ್ಥಿತರಿರುತ್ತಾರೆ. ಸಾಯಂಕಾಲ 4:30ಕ್ಕೆ ಸರಿಯಾಗಿ ಪ್ರಾಂತ್ಯದ ಪರಿಮಿತಿಯಲ್ಲಿ ಬರುವ ಲಯನ್ಸ್ ಕ್ಲಬ್ ಗಳಾದ, ಬೆಳ್ತಂಗಡಿ, ಮೂಡುಬಿದ್ರೆ, ಬೆಳುವಾಯಿ, ಬಪ್ಪನಾಡು ಇನ್ಸ್ಪೈರ್, ಗುರುಪುರ ಕೈಕಂಬ, ಮುಚ್ಚುರು ನೀರುಡೆ, ಸುಲ್ಕೇರಿ, ವೇಣೂರು, ಅಲಂಗಾರ್, ಲಿಯೋ ಕ್ಲಬ್ ಗಳಾದ ಮುಚ್ಚುರು ನೀರುಡೆ, ಬಪ್ಪನಾಡು ಇನ್ಸ್ಪೆರ್, ಮೂಡಬಿದ್ರೆ, ಪ್ರಾಂತ್ಯದ 9 ಕ್ಲಬ್ ಗಳ ಸದಸ್ಯರು ಹಾಗೂ ಪದಾಧಿಕಾರಿಗಳಿಂದ ಬ್ಯಾನರ್ ಪ್ರೆಸೆಂಟೇಷನ್ ಕಾರ್ಯಕ್ರಮ ನಡೆಯಲಿದೆ.

ಬಡವರಿಗೆ ಹಾಗೂ ಸಾರ್ವಜನಿಕ ವಿವಿಧ ಸೇವಾ ಚಟುವಟಿಕೆ ಕಾರ್ಯಕ್ರಮ ನಡೆಯಲಿದೆ. ಅಗತ್ಯವಿರುವರಿಗೆ ಸೇವೆ ಸಲ್ಲಿಸಲು ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು, ಪ್ರತಿ ಅನುಭವವು ಸಮಾಜ ಸೇವೆಯ ಮೂಲಕ ನಾಯಕತ್ವದ ಗುಣವನ್ನು ಸುಧಾರಿಸುತ್ತ, ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಒಂದೆಡೆ ಸೇವೆಗೆ ಹೆಸರುವಾಸಿಯಾದರೆ ಇನ್ನೊಂದೆಡೆ ಆತ್ಮೀಯತೆಗೆ ಒತ್ತು ಕೊಡುವ ಸಂಸ್ಥೆ, ಮೌಲ್ಯ ಭರಿತ ಸ್ನೇಹ, ಶ್ರೀಮಂತ ಹೃದಯವಂತಿಕೆಯ ಅಮೂಲ್ಯ ಆತ್ಮೀಯತೆ, ಸಾಮರಸ್ಯತೆ, ಭಾವೈಕ್ಯತೆ, ಎಲ್ಲಾ ಜಾತಿ ಧರ್ಮ ಸೇರಿ ಸಮಾಜಕ್ಕೆ ಸೇವೆಯನ್ನು ನೀಡುವ ಸಂಸ್ಥೆಯಾಗಿದೆ.

ಅಲಂಗಾರ್ ಕ್ಲಬ್ ನ ಆಥಿತ್ಯ ದಲ್ಲಿ ನಡೆಯುವ ಪ್ರಾಂತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲ. ಜರಾಲ್ಡ್ ರೋಬೊ ಅಲಂಗಾರ್ , ಕಾರ್ಯದರ್ಶಿಯಾಗಿ ಲ. ವೆಂಕಟೇಶ್ ಹೆಬ್ಬಾರ್ ಬಪ್ಪನಾಡು , ಕೋಶಾಧಿಕಾರಿಯಾಗಿ ಲ.ಜಗದೀಶ್ ಚಂದ್ರ ಡಿ. ಕೆ.ವೇಣೂರ್, ಗೌರವಾಧ್ಯಕ್ಷರಾಗಿ ಲ Rev. Fr. ಬಸಿಲ್ ವಸ್, ಹಾಗೂ ಲ. ಶ್ರೀಪತಿ ಭಟ್ ಮೂಡಬಿದ್ರೆ, ಕಾರ್ಯಕ್ರಮದ ಸಂಯೋಜಕರಾದ ಲ. ರೋಷನ್ ಡಿಸೋಜ ಮುಚ್ಚುರು ನೀರುಡೆ, ಪ್ರಾಂತೀಯ ಅಂಬಾಸಿಡರ್ ಲ. ಪ್ರಕಾಶ್ ಶೆಟ್ಟಿ ನೊಚ್ಚ ಬೆಳ್ತಂಗಡಿ, ಪ್ರಾಂತೀಯ ಸಂಯೋಜಕ ಲ. ಜೇಮ್ಸ್ ಮೆಂಡಾ ಗುರುಪುರ, ವಲಯ ಅಧ್ಯಕ್ಷರುಗಳಾದ ಲ. ಪ್ರತಿಭಾ ಹೆಬ್ಬಾರ್ ಬಪ್ಪನಾಡು, ಲ. ದಿನೇಶ್ ಎಂ.ಕೆ. ಮೂಡುಬಿದ್ರೆ, ವಲಯ ಸಂಯೋಜಕರಾದ ಲ ಅಶೋಕ್ ಬಿ. ನಾಯ್ಕ್ ಪ್ರಾಂತೀಯ ತಂಡದ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಂದು ವಲಯ ಸಂಯೋಜಕರಾದ ಲ.ಡಾ. ದೇವಿಪ್ರಸಾದ್ ಬೊಲ್ಮ ಬೆಳ್ತಂಗಡಿ ಇವರು ತಿಳಿಸಿದ್ದಾರೆ.

Related posts

ಅರಸಿನಮಕ್ಕಿ ಗ್ರಾ.ಪಂ.ನಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಬಿ.ಜೆ.ಪಿ ಕಾರ್ಯದರ್ಶಿ ಹುದ್ದೆಯಿಂದ ಸೆಲೆಸ್ಟಿನ್ ಡಿಸೋಜ ವಜಾ

Suddi Udaya

ಉಜಿರೆ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ

Suddi Udaya

ಕಳೆಂಜ ರಾಜು ಜೋಸೆಫ್ ಅವರ ಸಾವು ಪ್ರಕರಣ ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಮಗನಿಂದ ಠಾಣೆಗೆ ದೂರು

Suddi Udaya

ಬಟ್ಲಡ್ಕ ಜಮಾಅತ್ ನ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Suddi Udaya

ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಂ.ಆರ್. ಶೇಕ್ ಲತೀಫ್ ನೇಮಕ

Suddi Udaya
error: Content is protected !!