ಮಲೆಬೆಟ್ಟು: ಕೊಯ್ಯೂರು ಗ್ರಾಮದ ಬದಿನಡೆ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 8ರಿಂದ ಪ್ರಾರಂಭಗೊಂಡು 11ರವರೆಗೆ ನಡೆಯಲಿದೆ.
ಫೆ. 8ರಂದು ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪ್ರಸನ್ನ ಪೂಜೆ, ರಾತ್ರಿ ಶ್ರೀ ಪಂಚದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಸಂಘ ಆದೂರು ಪೇರಾಲ್ ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನ ಸುಧನ್ವ ಮೋಕ್ಷ, ಶ್ರೀ ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯ ಬಲಿ, ನಡೆಯಿತು.
ಇಂದು ಬೆಳಿಗ್ಗೆ ದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 8.30ರಿಂದ ಶ್ರೀದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.