29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.11 : ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ : ಶ್ರೇಷ್ಠ ಮಹಾಧರ್ಮಾಧ್ಯಕ್ಷರುಗಳು ಭಾಗಿ -ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಡಾ.ಹೆಗ್ಗಡೆ ಆಗಮನ

ಬೆಳ್ತಂಗಡಿ: ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯವು ಫೆ.11 ರಂದು ಅದರ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮ್ಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಪ್ರಾಂತ್ಯದ ಪಿ.ಆರ್. ಓ. ಫಾ| ಟೋಮಿ ಕ್ಯಾಲಿಕಾಟ್ ಹೇಳಿದರು.

ಅವರು ಫೆ.9 ರಂದು ಧರ್ಮಪ್ರಾಂತ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪೂರ್ವಾಹ್ನ ಗಂಟೆ 8.45ಕ್ಕೆ ವಂದನೆಗಳೊಂದಿಗೆ ಒಮ್ಮನದಿಂ’ ಕೃತಜ್ಞತಾ ದಿವ್ಯಬಲಿಪೂಜಾರ್ಪಣೆ ನಡೆಯಲಿದೆ. ಕರ್ನಾಟಕ ಹಾಗೂ ಕೇರಳದಿಂದ ಶ್ರೇಷ್ಠ ಮಹಾಧರ್ಮಾಧ್ಯಕ್ಷರುಗಳು, ಅನೇಕ ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಜನರು ಈ ದಿವ್ಯ ಬಲಿಪೂಜೆಯಲ್ಲಿ ಪಾಲುಗೊಳ್ಳಲಿದ್ದಾರೆ. ಪೂರ್ವಾಹ್ನ ಗಂಟೆ 11.00ಕ್ಕೆ ರಜತ ಸಂಭ್ರಮದ ಸಮಾರೋಪ ಸಮಾರಂಭವು ಜರುಗಲಿದೆ.

ಪ್ರಸ್ತುತ ಸಮಾರಂಭದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಯವರಾದ ಸಿದ್ಧರಾಮಯ್ಯನವರು, ಧಮ೯ಸ್ಥಳ ಧಮ೯ಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ಕರ್ನಾಟಕ ವಿಧಾನ ಸೌಧದ ಸಭಾಪತಿಗಳಾದ ಯು. ಟಿ. ಖಾದರ್‌ರವರು. ಇಂಧನ ಸಚಿವರು ಹಾಗೂ ಕರ್ನಾಟಕ ಸರಕಾರದ ಕ್ರೈಸ್ತ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ಜೆ. ಜಾರ್ಜ್, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ದಕ್ಷಿಣ ಕನ್ನಡ ಜಿಲ್ಲೆಯ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಸ್ಥಳೀಯ ಶಾಸಕ ಹರೀಶ್ ಪೂಂಜ, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್ ಸೇರಿದಂತೆ ಎಂಎಲ್ಸಿ ಗಳು, ಜನಪ್ರತಿನಿಧಿಗಳು ಹಾಗೂ ಇತರ ಹಲವು ಗಣ್ಯರು ಪಾಲುಗೊಳ್ಳಲಿದ್ದಾರೆ ಎಂದರು.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ನೆಲೆನಿಂತ ಸಿರಿಯನ್ ಕಥೋಲಿಕ್ ಕ್ರೈಸ್ತರ ಆಧ್ಯಾತ್ಮಿಕ ಅವಶ್ಯಕತೆಗಳಿಗಾಗಿ ಬಹುಕಾಲದ ಬೇಡಿಕೆಯಾಗಿದ್ದ ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯು 1999 ಏಪ್ರಿಲ್ 24 ರಂದು ಪ್ರಾತಃ ಸ್ಮರಣೀಯ ಜಗದ್ಗುರು ಸಂತ ಜಾನ್ ಪೌಲ್ ದ್ವಿತೀಯರ *Cum Ampla’ ಎಂಬ ಪವಿತ್ರ ಆದೇಶದಂತೆ ಸಾಕ್ಷಾತ್ಕಾರಗೊಂಡಿತು. ಅದೇ ದಿನ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ನೇಮಕಗೊಂಡರು. 1999 ಆಗಸ್ಟ್ 4 ರಂದು ಧರ್ಮಪ್ರಾಂತ್ಯದ ಉದ್ಘಾಟನೆ ಮತ್ತು ಪ್ರಥಮ ಧರ್ಮಾಧ್ಯಕ್ಷರ ಪಟ್ಯಾಭಿಷೇಕ ಸಮಾರಂಭವು ಬೆಳ್ತಂಗಡಿಯಲ್ಲಿ ವೈಭವೋಪೇತವಾಗಿ ಜರಗಿತು ಎಂದು ಹೇಳಿದರು.

ಬೆಳ್ಳಿಹಬ್ಬದ ಆಚರಣೆಯ ಉದ್ಘಾಟನೆಯನ್ನು ಬೆಳ್ತಂಗಡಿ ಪ್ರಧಾನ ದೇವಾಲಯದಲ್ಲಿ 2023 ಆಗಸ್ಟ್ 4 ರಂದು ಜ್ಯೂಬಿಲಿ ದೀಪ ಬೇಳಗಿಸಿ ನೆರವೇರಿಸಲಾಯಿತು. ಕಳೆದುಹೋದ 23 ವರ್ಷಗಳ ಹೃಸ್ವಕಾಲದಲ್ಲಿ ಕೈ ಹಿಡಿದು ಮುನ್ನೆಡೆಸಿದ ದೇವರಿಗೆ ಪ್ರಣಾಮಗಳನ್ನರ್ಪಿಸಿ, ನೆಲೆನಿಂತ ನಾಡಿನಲ್ಲಿ ಸಮೃದ್ಧಿಯನ್ನು ಹರಿಸಿದ ಪರಮಪಿತನಿಗೆ ಆಗಸ್ಟ್ 4ರಂದು ಕೃತಜ್ಞತಾ ಬಲಿಯರ್ಪಣೆ ನಡೆಯಿತು. ಒಂದು ಧರ್ಮಪ್ರಾಂತ್ಯವಾಗಿ ರೂಪಿಸಿ 25 ವರ್ಷಗಳ ಕಾಲ ಅಂಗೈಯಲ್ಲಿಟ್ಟು ಪರಿಪಾಲಿಸಿ ದೇವರು ನೀಡಿದ ಅನಂತ ಕೃಪೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ರೈತಾಪಿ ಜನಾಂಗವೊಂದನ್ನು ಕರ್ನಾಟಕದಲ್ಲಿ ನೆಲೆಗೊಳಿಸಿದ ಪರಮ ಪ್ರಭುವಿನ ಪವಾಡ ಸದೃಶ ಸರಪಾಲನೆಗೆ ಈ ಸಮೂಹ ಈಗ ಕೃತಜ್ಞತಾಸ್ತೋತ್ರಗಳನ್ನು ಅರ್ಪಿಸುತ್ತಿದೆ. ದೇವರ ವಾಕ್ಯಗಳ, ಧರ್ಮಸಭಾ ಭೋಧನೆಗಳ ಮತ್ತು ಸೀರೋ ಮಲಬಾರ್ ಧರ್ಮಸಭೆಯ ಪವಿತ್ರ ಪರಂಪರೆಯ ಬೆಳಕಿನಲ್ಲಿ ಆತ್ಮಶೋಧನೆಮಾಡಿ ತಮ್ಮ ಸುತ್ತಮುತ್ತಲಿನ ಜನಸಮೂಹಕ್ಕೆ ಜ್ಯೋತಿಯಂತೆ ಬೆಳಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಬೆಳ್ತಂಗಡಿ ಧರ್ಮಪ್ರಾಂತ್ಯವು ಕರ್ನಾಟಕದಲ್ಲಿರುವ ಸೀರೋ ಮಲಬಾರ್ (Syro-Malabar/ಸಿರಿಯನ್ ಕಥೋಲಿಕ್)ರ ಬಹುಕಾಲದ ಬೇಡಿಕೆಯಾಗಿತ್ತು. ಸಂತ ತೋಮಸರಿಂದ ವಿಶ್ವಾಸ ಪಡೆದ ಪರಂಪರೆಯ, 2,000 ವರ್ಷಗಳ ಆಧ್ಯಾತ್ಮಿಕ ಇತಿಹಾಸವುಳ್ಳ, ಭಾರತೀಯ ಸಂಸ್ಕೃತಿಯನ್ನು ಧಾರ್ಮಿಕ ಆಚರಣೆಗಳಲ್ಲಿ ಮೈಗೂಡಿಸಿಕೊಂಡ ಒಂದು ಸಮೂಹವಾಗಿದೆ ಸೀರೋ ಮಲಭಾರ್ ಕ್ರೈಸ್ತರು. ವಿವಿಧ ಕಾರಣಗಳಿಂದ ಈ ನಾಡಿಗೆ ಬಂದವರಾದರೂ ಕೃಷಿ ಪ್ರಿಯರೂ ಶ್ರಮಜೀವಿಗಳೂ ಆದ ಸೀರೋ ಮಲಭಾರ್ ಸಮೂಹವು ಬಹುಬೇಗನೆ ಈ ನಾಡಿನ ಪ್ರಧಾನ ವಾಹಿನಿಗೆ ಸೇರಿ ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳೊಂದಿಗೆ ಸಮನ್ವಯ ಸಾಧಿಸಿತು. ಈ ನಾಡಿಗೆ ನೂತನ ಕೃಷಿ ಪದ್ಧತಿಗಳನ್ನು ವಾಣಜ್ಯ ಬೆಳೆಗಳಾದ ರಬ್ಬರ್, ಕರಿಮೆಣಸು, ಅಡಿಕೆ, ಎಣ್ಣೆ ಹುಲ್ಲು ಇತ್ಯಾದಿಗಳನ್ನು ಪರಿಚಯಿಸಿತು. ನಾಡಿನ ಆರ್ಥಿಕಾಭಿವೃದ್ಧಿಗೆ, ಸ್ಥಳೀಯರ ಸ್ವಾವಲಂಬನೆಯ ಬದುಕಿಗೆ ಪ್ರೇರಕರಾದರು. ತಮ್ಮ ಪಾರಂಪರಿಕ ನಂಬಿಕೆಗಳನ್ನು ಕೈ ಬಿಡದೆ ಕನ್ನಡವನ್ನು, ಅರೆಗನ್ನಡವನ್ನು, ಕುಂದಗನ್ನಡವನ್ನು, ತುಳುವನ್ನು, ಕೊಡುಗಿನ ಭಾಷೆಯನ್ನು ಕರಗತ ಮಾಡಿಕೊಂಡರು. ಈ ನೆಲದ ಭಾಷೆ. ಸಾಹಿತ್ಯ, ಶಿಕ್ಷಣ, ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅತಿ ಹಿಂದುಳಿದ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದ ಪ್ರಾಮುಖ್ಯತೆಯನ್ನು ಎಲ್ಲರಿಗೂ ಮನದಟ್ಟು ಮಾಡಿಕೊಟ್ಟರು. ಸೀರೋ ಮಲಬಾರಿನ ಹೊಸ ತಲೆಮಾರಿಗೆ ತುಳು ಬಾಷೆ ಮನೆ ಮಾತು. ಕನ್ನಡದಲ್ಲಿ ಸಮರ್ಪಕವಾಗಿ ಸಂವಹಿಸಬಲ್ಲ ನೂರಾರು ವಿದ್ಯಾವಂತರು ಈ ಸಮೂಹದಲ್ಲಿದ್ದಾರೆ. ದೇವಾಲಯಗಳಲ್ಲಿ ಭಾನುವಾರ ದಿನ ನಡೆಸುವ ಧರ್ಮೋಪದೇಶ ತರಗತಿಗಳನ್ನೂ ಪರೀಕ್ಷೆಗಳನ್ನೂ ಕನ್ನಡ ಮಾಧ್ಯಮದಲ್ಲೇ ನಡೆಸಲಾಗುತ್ತಿದೆ. ಆರಾಧನಾ ವಿಧಿಗಳಲ್ಲಿ ಅತಿಶ್ರೇಷ್ಠವಾದ ದಿವ್ಯ ಬಲಿ ಪೂಜೆಯನ್ನು ಕನ್ನಡಕ್ಕೆ ಭಾಷಾಂತರಿಸಿ, ಕನ್ನಡ ಗೀತೆಗಳನ್ನು ಅಳವಡಿಸಿ, ಉಪಯೋಗಿಸಲಾಗುತ್ತಿದೆ. ಹಿಂದೂ, ಇಸ್ಲಾಂ, ಜೈನ, ಬೌದ್ಧ, ಶೈವ, ವೀರಶೈವಾದಿ ಜನಸಮೂಹದ ಮಧ್ಯೆ ಮತೀಯ ಸಾಮರಸ್ಯದೊಂದಿಗೆ ಬಾಳಿ ಪ್ರಭು ಯೇಸುಕ್ರಿಸ್ತರ ಭಕ್ತಿಯಲ್ಲಿ ಅಚಲ ನಿಷ್ಠೆಯನ್ನಿಟ್ಟು ಬದುಕು ಸಡೆಸುವವರು. ಕ್ರೈಸ್ತ ಧರ್ಮದ ಅಂತರಾಳವಾದ ಪರಪ್ರೀತಿಯನ್ನು ಜೀವನದಲ್ಲಿ ಸಾಕ್ಷಾತ್ಕರಿಸಲು, ಅಸಹಾಯಕರಿಗೂ, ನಿರ್ಗತಿಕರಿಗೂ ಆಶ್ರಯ ನೀಡುವ ಸಾಮಾಜಿಕ ಬದ್ಧತೆಯನ್ನು ತೋರುವ ಜನಸಮೂಹ ಸೀರೋ, ಮಲಭಾರ್ ಕ್ರೈಸ್ತರು ಎಂದು ವಿವರಿಸಿದರು.
8 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ:
ವಿಕಾರ್ ಜನರಲ್ ಫಾ|ವಲಯ ಪರಂಬಿಲ್ ಮಾತನಾಡಿ ಮುಖ್ಯಮಂತ್ರಿ ಬರುವ ಕಾರ್‍ಯಕ್ರಮ ಒಂದೆರಡು ದಿನಗಳಲ್ಲಿ ನಿಗದಿಯಾಗಲಿದೆ. ಸಚಿವ ಜೋರ್ಜ್ ಬರುತ್ತಾರೆ. ಬೆಳಿಗ್ಗೆ 8.00 ರಿಂದ 11ರವರೆಗೆ ಧಾರ್ಮಿಕ ಕಾರ್‍ಯಕ್ರಮ 11ರಿಂದ 1 ಗಂಟೆ ತನಕ ಸಾರ್ವಜನಿಕ ಸಭೆ ನಡೆಯಲಿದೆ. ಸುಮಾರು 8ಸಾವಿರ ಮಂದಿ ಕಾರ್‍ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಕಾರ್ ಜನ‍ರಲ್ ಫಾ| ವಲಿಯ ಪರಂಬಿಲ್, ಮೀಡಿಯಾ ಡೈರೆಕ್ಟರ್ ಫಾ| ಮ್ಯಾಥ್ಯೂ ಕ್ಯಾಲಿಕಟ್ ಉಪಸ್ಥಿತರಿದ್ದರು.

Related posts

ಕೊಕ್ಕಡ ಮಾಯಿಲಕೋಟೆ ದೈವಸ್ಥಾನಕ್ಕೆ ಪುತ್ತೂರು ಗೇರು ಅಭಿವೃದ್ಧಿ ನಿಗಮದ ರವಿಕುಮಾರ್ ಭೇಟಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಫೋನೆಟಿಕ್ಸ್ ಇನ್ ಆಕ್ಷನ್: ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಾಗಾರ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ಉಜಿರೆ :ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ

Suddi Udaya

ಶ್ರೀ ಕ್ಷೇ. ಧ. ಗ್ರಾ. ಯೋ. ವತಿಯಿಂದ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯ ಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ರಕ್ತಪರೀಕ್ಷಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!