ಬೆಳ್ತಂಗಡಿ: ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯವು ಫೆ.11 ರಂದು ಅದರ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮ್ಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವವನ್ನು ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಪ್ರಾಂತ್ಯದ ಪಿ.ಆರ್. ಓ. ಫಾ| ಟೋಮಿ ಕ್ಯಾಲಿಕಾಟ್ ಹೇಳಿದರು.
ಅವರು ಫೆ.10 ರಂದು ಜ್ಞಾನ ನಿಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಅಸಹಾಯಕ ಕುಟುಂಬಗಳಿಗೆ ನಿರ್ಮಿಸಲಾದ 25 ಮನೆಗಳ ಕೀಲಿ ಕೈ ಯನ್ನು ಹಸ್ತಾಂತರಿಸಲಾಗುವುದು. ಅಸಹಾಯಕ ಮಕ್ಕಳಿಗಾಗಿ ವಿದ್ಯಾನಿಧಿ ಕಾರ್ಯಕ್ರಮದ ಚಾಲನೆ ನಡೆಯಲಿದೆ. ಗಣ್ಯರನ್ನು ಮುಖ್ಯದ್ವಾರದಿಂದ ಸ್ವಾಗತಿಸಲಾಗುವುದು. ವಾಹನ ಪಾರ್ಕಿಂಗ್ ನ ವ್ಯವಸ್ಥೆಯನ್ನು ತಾಲೂಕು ಕ್ರೀಡಾಂಗಣದಲ್ಲಿ ಮಾಡಲಾಗಿದ್ದು, ಬಂದಂತಹ ಸರ್ವರಿಗೂ ಸಸ್ಯಾಹಾರ ಹಾಗೂ ಮಾಂಸಹಾರದ ವ್ಯವಸ್ಥೆಗಳಿವೆ. ಎಲ್ಲಾ ಸುಸಜ್ಜಿತ ವ್ಯವಸ್ಥೆಯನ್ನು ನಾಳೆ ಕಾರ್ಯರೂಪಕ್ಕೆ ತರಲಿದ್ದೇವೆ ಎಂದರು.
ನಿರ್ದೇಶಕ ಫಾ| ಮ್ಯಾಥ್ಯೂ ಕ್ಯಾಲಿಕಟ್ ಮಾತನಾಡಿ ಸಂಸದರು, ಶಾಸಕರು, ಆರಕ್ಷಕ ಇಲಾಖೆ ಸಹಕರಿಸುತ್ತೇವೆ ಎಂದಿದ್ದಾರೆ. ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.