April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕುವೆಟ್ಟು ಗ್ರಾ.ಪಂ ಸದಸ್ಯೆ ಮೋಹಿನಿ ಅಸೌಖ್ಯದಿಂದ ನಿಧನ

ಕುವೆಟ್ಟು: ಇಲ್ಲಿಯ ಓಡಿಲ್ನಾಳ ಗ್ರಾಮದ ವರಕಬೆ ನಿವಾಸಿ ಗ್ರಾ.ಪಂ ಸದಸ್ಯೆ ಶ್ರೀಮತಿ ಮೋಹಿನಿ (42ವ) ಅವರು ಅಸೌಖ್ಯದಿಂದ ಬಳಲಿ ಫೆ.9 ರಂದು ರಾತ್ರಿ ನಿಧನರಾದರು.


ಇವರು ಕಳೆದ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲಿತರಾಗಿ ಪಿಲಿಚಾಮುಂಡಿಕಲ್ಲು 1ನೇ ವಾರ್ಡ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಪಂಚಾಯತು ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತಿ ಮೋನಪ್ಪ ನಾಯ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೋಹಿನಿ ನಿಧನಕ್ಕೆ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್, ಬೆಳ್ತಂಗಡಿ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ, ಉಪಾಧ್ಯಕ್ಷ ಹನೀಫ್ ಪುಂಜಾಲಕಟ್ಟೆ, ಕಾರ್ಯದರ್ಶಿ ಅಶ್ಪಕ್ ಪುಂಜಾಲಕಟ್ಟೆ, ಗ್ರಾ.ಪಂ ಸದಸ್ಯರಾದ ಮುಸ್ತಫಾ, ಸಮೀರ್, ರಿಯಾಝ್, ಸದಸ್ಯರಾದ ಸಾಲಿ, ಅಮೀನಾ, ಮೈಮುನಾ, ಮದ್ದಡ್ಕ ಹಾಗೂ ಪಕ್ಷದ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಹಾಗೂ ಸೆಲ್ಕೋ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಸಮೃದ್ಧಿ ಸಂತೃಪ್ತಿ ಸಬಲೀಕರಣ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya

ಕನ್ಯಾಡಿ-1: 25 ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಪ್ರಭಾರ ಮುಖ್ಯೋಪಾಧ್ಯಾಯ ಹನುಮಂತರಾಯ ರವರಿಗೆ ರಜತ ಸಂಭ್ರಮ

Suddi Udaya

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ

Suddi Udaya

ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯಿಂದ ರೂ.6.96 ಲಕ್ಷ ವಂಚನೆ

Suddi Udaya

ಬಜಿರೆ-ಹೊಸಪಟ್ಣದಲ್ಲಿ ಹೊನಲು ಬೆಳಕಿನ ಪುರುಷರ 60ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya

ನೆರಿಯ: ಮುಚ್ಚಿರಾಲಿ ಎಂಬಲ್ಲಿ ಅಪಾಯದ ಅಂಚಿನಲ್ಲಿರುವ ಕಾಲುಸಂಕ : ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಫಾರೆಸ್ಟರ್ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ : ಮರವನ್ನು ತೆರವುಗೊಳಿಸುವುದಾಗಿ ಭರವಸೆ

Suddi Udaya
error: Content is protected !!