ಬೆಳ್ತಂಗಡಿ: ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯದ ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷದೀಕ್ಷೆಯ ರಜತ ಮಹೋತ್ಸವವನ್ನು ಬೆಳ್ತಂಗಡಿಯಲ್ಲಿ ಫೆ.11ರಂದು ಆದ್ದೂರಿಯಾಗಿ ಜರುಗಿತು.
ಕಾಯ೯ಕ್ರಮವನ್ನು ಸೀರೋ ಮಲಬಾರ್ ಕ್ಯಾಥೋಲಿಕ್ ಚರ್ಚ್ ನ ಮಹಾಧಮ೯ಧ್ಯಾಕ್ಷರಾದ ರೆ| ರಾಫೆಲ್ ತಟ್ಟಿಲ್ ದೀಪ ಬೆಳಗಿಸಿ ಉದ್ಘಾಟಿಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ , ಧಮ೯ಸ್ಥಳ ಧಮ೯ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕರ್ನಾಟಕ ವಿಧಾನ ಸೌಧದ ಸಭಾಪತಿಗಳಾದ ಯು. ಟಿ. ಖಾದರ್. ಕರ್ನಾಟಕ ಸರಕಾರದ ಕ್ರೈಸ್ತ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ಜೆ. ಜಾರ್ಜ್, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ದಕ್ಷಿಣ ಕನ್ನಡ ಜಿಲ್ಲೆಯ ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕರುಗಳಾದ ಸುನೀಲ್ ಕುಮಾರ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್ , ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಎಂ ಎಲ್ ಸಿ ಐವನ್ ಡಿಸೋಜಾ , ಬೆಂಗಳೂರು ಅಚ್೯ ಬಿಷಪ್ ರೆ| ಪೀಟರ್ ಮಾಕ್ಡೋ, ಮಂಗಳೂರು ಬಿಷಪ್ ರೆ| ಪೀಟರ್ ಪೌಲ್ ಸಲ್ದಾನ, ಪುತ್ತೂರು ಬಿಷಪ್ ರೆ| ಗಿವಗೀ೯ಸ್ ಮಕ್ರೋಸ್, ಕೊಟ್ಟಾಯಂ ಅಚ್೯ ಬಿಷಪ್ ರೆ| ಮ್ಯಾಥ್ಯೂ ಮುಲ್ಕಟ್, ಬ್ರಹ್ಮವರ ಬಿಷಪ್ ಯಾಕೂಬ್ ಮಾರ್ ಇಲ್ಯಾಸ್ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ತಲಶೇರಿ ಅಚ್೯ ಬಿಷಪ್ ರೆ| ಜೋಸೆಫ್ ಪಪ್ಲೇನಿ ವಹಿಸಿದ್ದರು. ಬೆಳ್ತಂಗಡಿ ಧಮ೯ಪ್ರಾಂತ್ಯದ ಧಮಾ೯ಧ್ಯಕ್ಷರಾದ ರೆ| ಲಾರೆನ್ಸ್ ಮುಕ್ಕುಯಿ ಉಪಸ್ಥಿತರಿದ್ದರು. ಪ್ರಮುಖರಾದ ಮಾಜಿ ಸಚಿವ ರಮನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್,ಉಜಿರೆ ಕಾಳಬೈರವ ಸೊಸೈಟಿ ಅಧ್ಯಕ್ಷ ರಂಜನ್ ಜಿ ಗೌಡ,ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ನ,ನಾಗೇಶ್ ಗೌಡ,ಪ್ರಮುಖರಾದ ಅಭಿನಂದನ್ ಹರೀಶ್ ಕುಮಾರ್ ಮೊದಲಾದವರು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.
ದಿವ್ಯಾ ಬಲಿಪೂಜೆ:ಪೂರ್ವಾಹ್ನ ಗಂಟೆ 8.45ಕ್ಕೆ ವಂದನೆಗಳೊಂದಿಗೆ ಒಮ್ಮನದಿಂ’ ಕೃತಜ್ಞತಾ ದಿವ್ಯಬಲಿಪೂಜಾರ್ಪಣೆ ನಡೆಯಿತು. ಕರ್ನಾಟಕ ಹಾಗೂ ಕೇರಳದಿಂದ ಶ್ರೇಷ್ಠ ಮಹಾಧರ್ಮಾಧ್ಯಕ್ಷರುಗಳು, ಅನೇಕ ಮಹಾಧರ್ಮಾಧ್ಯಕ್ಷರುಗಳು, ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತಾದಿಗಳುಈ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು. ವಿಕಾರ್ ಜನರಲ್ ಫಾ| ವಲಿಯಪರಂಬಿಲ್ ಸ್ವಾಗತಿಸಿದರು. ಲಿಲ್ಲಿ ಆಂಟೋನಿ ತೋಟಪಲ್ಲಿ ಧನ್ಯವಾದವಿತ್ತರು.ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ಭಾಗಗಳ ಸಿರಿಯನ್ ಕಥೋಲಿಕ್ ಕ್ರೈಸ್ತರು ಭಾಗವಹಿಸಿದ್ದರು..