September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜು

ನಿಟ್ಟಡೆ: ಕುಂಭಶ್ರೀ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ‘ಸಂಕಲ್ಪ-2025’ ಓರಿಯಂಟೇಶನ್

ನಿಟ್ಟಡೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾರ್ಗದರ್ಶಕವಾಗಿ ‘ಸಂಕಲ್ಪ 2025’ ಓರಿಯಂಟೇಶನ್ ಕಾರ್ಯಕ್ರಮವು ಕುಂಭಶ್ರೀ ಪಿ.ಯು. ಕಾಲೇಜಿನಲ್ಲಿ ಜೂ.5ರಂದು ಜರಗಿತು.

“ನೀವು ಕನಸು ಕಾಣಲೇಬೇಕು ನಿಮ್ಮ ಕನಸುಗಳು ನಿಜವಾಗುವ ಮುನ್ನ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯರು, ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರು ದೀಪ ಬೆಳಗಿಸಿ ಉದ್ಘಾಟಿಸಿದರು.

ಪ್ರಾಚಾರ್ಯೆ ಓಮನಾ ಎಂ.ಎ. ಅವರು ತಮ್ಮ ಭಾಷಣದಲ್ಲಿ ನೂತನ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಿಕ್ಷಣದ ಮೂಲಕ ವ್ಯಕ್ತಿತ್ವ ನಿರ್ಮಾಣ ಮಾಡುವ ಸಂಸ್ಥೆಯ ದೃಷ್ಟಿಕೋನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಬಿ.ಐ. ವೇಣೂರು ಶಾಖಾ ವ್ಯವಸ್ಥಾಪಕ ಹಿತೇಶ್ ಕುಮಾರ್ ಎಸ್.ವೈ. “ಅಭಿವೃದ್ಧಿ ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳು ತಮಗೆ ಇರುವ ಪೋಷಕರ ಕನಸನ್ನು ಅರ್ಥಮಾಡಿಕೊಳ್ಳಬೇಕು. ಆ ಕನಸು ನನಸಾಗಿಸುವ ಹೊಣೆ ತಮ್ಮದಾಗಿದೆ,” ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಎಸ್‌.ಎಸ್‌. ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಲಿಂಗರಾಜು ಅವರು, “ಶಿಕ್ಷಣವೆಂಬುದು ವ್ಯಕ್ತಿತ್ವ ವಿಕಾಸಕ್ಕೆ ಮುನ್ನಡೆಸುವ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಸದಾ ಗುರಿಯತ್ತ ಕಾಯಕ ಶೀಲದಿಂದ ನಡೆಯಬೇಕು. ಶಿಸ್ತಿನ ಜೀವನವೇ ಯಶಸ್ಸಿನ ಮೂಲವಾಗಿದೆ,” ಎಂದು ಉಪದೇಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸ್ಥಾಪಕ ಗಿರೀಶ್ ಕೆ.ಹೆಚ್ ಅವರು, “ಶಿಸ್ತಿನಿಂದ ಹಾಗೂ ದೃಢ ಸಂಕಲ್ಪದಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಬಹುದು. ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವೂ ಮುಖ್ಯ,” ಎಂದು ಸಲಹೆ ನೀಡಿದರು. ಸಂಸ್ಥೆಯ ಸಂಚಾಲಕರು ಹಾಗೂ ಗಣಿತ ವಿಭಾಗದ ಉಪನ್ಯಾಸಕರು ಅಶ್ವಿತ್ ಕುಲಾಲ್ ಸಂಸ್ಥೆಯ ಪ್ರತಿನಿಧಿಯಾಗಿ ಸ್ಫೂರ್ತಿದಾಯಕ ಭಾಷಣವನ್ನು ನೀಡಿದರು.

ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮನೋಜ್ ಎಸ್ ನೀಟ್ ಮತ್ತು ವೈದ್ಯಕೀಯ ಭವಿಷ್ಯದ ಬಗ್ಗೆ, ಉಪನ್ಯಾಸಕಿ ಲಿಖಿತಾ ಎಂ. (ಭೌತಶಾಸ್ತ್ರ ವಿಭಾಗ) ಅವರು NEET ಪರೀಕ್ಷೆ ಹಾಗೂ ಇಂಜಿನಿಯರಿಂಗ್ ಪ್ರವೇಶಕ್ಕೆ ಬೇಕಾದ ಮಾಹಿತಿ ನೀಡಿದರು. ಉಪನ್ಯಾಸಕಿ ಶರಣ್ಯ ಕೆ.ಎಸ್. (ವಾಣಿಜ್ಯ ವಿಭಾಗ) ವಿದ್ಯಾರ್ಥಿಗಳಿಗೆ CA-CPT ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳ ಕುರಿತು ವಿವರಿಸಿದರು.

ಸುಮನ್ (ಕನ್ನಡ ವಿಭಾಗ) ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಚೈತನ್ಯ ಮತ್ತು ಶ್ರೀಷಾ ನಿರೂಪಿಸಿದರು. ಉಪನ್ಯಾಸಕ ಸಂತೋಷ್ ವಂದಿಸಿದರು.

Related posts

ಮುಂಡೂರು ಶ್ರೀ ಉದ್ಭವ ಗಣಪತಿ ಶ್ರೀ ನಾಗಾಂಬಿಕಾ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಚಾರ್ಮಾಡಿ: ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಬೆಳ್ತಂಗಡಿ ಪಿಎಸ್‌ಐ ಧನರಾಜ್ ಟಿ.ಎಂ ಹಾಗೂ ಪುಂಜಾಲಕಟ್ಟೆ ಪಿಎಸ್‌ಐ ಓಡಿಯಪ್ಪ ವರ್ಗಾವಣೆ

Suddi Udaya

ವೇಣೂರು ಜಿನಪ್ರಸಾದ ಕಾಂಪ್ಲೆಕ್ಸ್‌ನಲ್ಲಿ ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್ ಉದ್ಘಾಟನೆ

Suddi Udaya

ತೆಂಕಕಾರಂದೂರು: ಅಕ್ರಮ ಮರಳು ಸಾಗಟ: ಆರೋಪಿ ಸಹಿತ ಪಿಕಪ್ ವಾಹನ ವಶ

Suddi Udaya

ತೋಟತ್ತಾಡಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಾಗಬನದಲ್ಲಿ ಪಂಚಮಿ ಪ್ರಯುಕ್ತ ವಿಶೇಷ ಪೂಜೆ

Suddi Udaya
error: Content is protected !!