ಗೇರುಕಟ್ಟೆ : ಫೆ.11 ರಂದು ಕಳಿಯ ಗ್ರಾಮ ಪಂಚಾಯತ್ ಗೆ ಸಂವಿಧಾನ ಜಾಗೃತಿ ಜಾಥಾ ಆಗಮಿಸಿತು.
ಗೇರುಕಟ್ಟೆ ಪೇಟೆಯಿಂದ ಪಂಚಾಯತ್ ತನಕ ವಾಹನ ಜಾಥ, ವಿವಿಧ ಇಲಾಖೆ ಸಿಬ್ಬಂದಿಗಳು, ಗ್ರಾಮಸ್ಥರು, ರಥವನ್ನು ಸ್ವಾಗತಿಸಿದರು.ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಮತ್ತು ಫ್ರೌಡ ಶಾಲಾ ವಿಧ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುರತ್ಕಲ್ ಕಲಾ ತಂಡದವರಿಂದ ಸಂವಿಧಾನದ ಬಗ್ಗೆ ಜಾಗೃತಿ ನಾಟಕ ಪ್ರದರ್ಶನ ನಡೆಯಿತು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಹಾಗೂ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ, ಪುಷ್ಪರ್ಚಾಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಳಿಯ ಗ್ರಾಮ ಸದಸ್ಯರಾದ ಅಬ್ದುಲ್ ಕರೀಂ,ಲತೀಫ್ ಪರಿಮ,ಕುಸುಮ ಎನ್,ಬಂಗೇರ,ಮರೀಟಾ ಪಿಂಟೋ,ಶ್ವೇತಾ ಶ್ರೀನಿವಾಸ, ಪುಷ್ಪ ನಾಳ, ಅಂಬೇಡ್ಕರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಣ್ಣ ಕೊಯ್ಯೂರು,ಜಿಲ್ಲಾ ಮಾನವ ಬಂಧುತ್ವ ಸಂಚಾಲಕ ಚನ್ನಕೇಶವ ಬೆಳ್ತಂಗಡಿ, ಸುರತ್ಕಲ್ ಜಾನಪದ ಕಲಾಸಂಘದ ಸದಸ್ಯರು,ಗೇರುಕಟ್ಚೆ ಅಟೋ ಚಾಲಕರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಹಾಗೂ ಪದಾಧಿಕಾರಿಗಳು,ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರ ಗ್ರಾಮ ಸಮಿತಿ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಪಂಚಾಯತು ಸಿಬ್ಬಂದಿಗಳು, ಗೇರುಕಟ್ಟೆ ಸರಕಾರಿ ಪ್ರಾಥಮಿಕ ಶಾಲಾ ಹಾಗೂ ಫ್ರೌಡ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದರು.