24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ತೆರಿಗೆಯ ಹೆಸರಿನಲ್ಲಿ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ: ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಮೊದಲು ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕೊಡುಗೆಗಳನ್ನು, ಯೋಜನೆಗಳನ್ನು ಒಂದು ಸಲ ಪರಾಮರ್ಶಿಸಿ ನೋಡಿ ಮತ್ತೆ ನನ್ನ ತೆರಿಗೆ ನನ್ನ ಹಕ್ಕು ಎಂಬ ನಾಟಕ ಪ್ರದರ್ಶಿಸಿ. ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ತೆರಿಗೆಯ ಹೆಸರಿನಲ್ಲಿ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತೀವ್ರವಾಗಿ ರಾಜ್ಯ ಸರಕಾರವನ್ನು ತರಾಟೆಗೆತೆಗೆದುಕೊಂಡಿದ್ದಾರೆ.

ಅವರು ತಮ್ಮ ಪತ್ರಿಕಾಹೇಳಿಕೆಯಲ್ಲಿ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಅಭಿವೃದ್ಧಿ ಶೂನ್ಯ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇದು ರಾಜ್ಯದ ಜನರ ದುರಾದೃಷ್ಟ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೊಸ ನಾಟಕವನ್ನು ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಘೋಷಣೆಯೊಂದಿಗೆ ಹೊರಟ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರಕಾರವು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ- ಮುಖಂಡರು ಸಾಕಷ್ಟು ಭರವಸೆಗಳನ್ನು ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದರು. ಅಭೂತಪೂರ್ವ ಬೆಂಬಲದೊಂದಿಗೆ ಸರಕಾರ ಅಧಿಕಾರಕ್ಕೆ ಬಂದಾಗ ಸಹಜವಾಗಿ ರಾಜ್ಯದ ಜನರಲ್ಲಿ ಅಪೇಕ್ಷೆ, ನಿರೀಕ್ಷೆಗಳು ಸಾಕಷ್ಟಿದ್ದವು. ಆದರೆ, ಅವೆಲ್ಲವೂ ಮಣ್ಣುಪಾಲಾಗಿದೆ. ಮತದಾರರಲ್ಲಿ ತಾವು ಮೋಸಹೋಗಿದ್ದೇವೆ ಎಂಬ ಅರಿವು ಮೂಡತೊಡಗಿದೆ ಎಂದು ತಿಳಿಸಿದ್ದಾರೆ.


ಒಂದು ಸುಳ್ಳನ್ನು ನೂರು ಬಾರಿ ಹೇಳಿ ವಿಧಾನಸಭಾ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದರೋ, ಈಗ ಅದೇರೀತಿ ‘ನನ್ನ ತೆರಿಗೆ ನನ್ನ ಹಕ್ಕು’ ಮೂಲಕ ಅದೇ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಆಸ್ಪದ ಕೊಡುವುದಿಲ್ಲ. ಸತ್ಯ ಸಂಗತಿಗಳನ್ನು ರಾಜ್ಯದ ಜನರ ಮುಂದೆ ಇಡಲಿದ್ದೇವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಗಾಲ ಬಿದ್ದಿದೆ ಬರ ಪರಿಹಾರ ನೀಡಿಲ್ಲ. ಅಲ್ಲದೆ ಕೆಲ ದಿನಗಳ ಹಿಂದೆ ಗುತ್ತಿಗೆದಾರ ಕೆಂಪಯ್ಯ ಅವರು ಶೇ 40% ಲಂಚದ ಆರೋಪವನ್ನು ಹೊರಿಸಿದ್ದಾರೆ. ಹೀಗಾಗಿ ಇವರು ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ‌. ನಾಚಿಕೆಯಾಗಬೇಕು ಇವರಿಗೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ. ಎನ್ ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಲಿ, ಯುಪಿಎ ಅವಧಿಯಲ್ಲಿ 82 ಸಾವಿರ ಕೋಟಿ ಮಾತ್ರ ಬಂದಿದೆ. ಮೋದಿ ಕಲಾವಧಿಯಲ್ಲಿ 2.82 ಲಕ್ಷ ಕೋಟಿ ಬಂದಿದೆ. ಎನ್. ಡಿ.ಎ. ಅವಧಿಯಲ್ಲಿ ಎರಡು ಲಕ್ಷ ಕೋಟಿ ರೂ ಹೆಚ್ಚಿಗೆ ಬಂದಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದವರು ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯನವರು.


ಮೊದಲು ರಾಜ್ಯಗಳಿಗೆ ಅನುದಾನ ಶೇ 32% ಬರುತ್ತಿತ್ತು. ಮೋದಿಯವರು ಅದನ್ನು ಶೇ 42% ಹೆಚ್ಚಳ ಮಾಡಿದ್ದಾರೆ.
ಹಣಕಾಸು ಆಯೋಗ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ, ಬಡತನ, ಜಸಂಖ್ಯೆ ತಲಾ ಆದಾಯ ಎಲ್ಲವನ್ನು ಪರಿಗಣನೆ ಮಾಡುತ್ತದೆ. 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದಾಗ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಆಗ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ತಿಳಿಸಲು ವಿಫಲವಾಗಿದೆ. ರಾಜ್ಯದ ಪಾಲು ಶೇ 4.7 % ದಿಂದ ಶೇ 3.6% ಕ್ಕೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.


ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 60 ಲಕ್ಷ ಜನರು ಆರೋಗ್ಯ ಸೌಲಭ್ಯ ಪಡೆದಿದ್ದಾರೆ.
ಮುದ್ರಾ ಯೋಜನೆ ಅಡಿಯಲ್ಲಿ 60 ಲಕ್ಷ ಯುವಕರಿಗೆ ಬ್ಯಾಂಕ್ ಸಾಲ ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಕಾಂಗ್ರೆಸ್ ‌ಅವಧಿಯಲ್ಲಿ 85 ಕಿ. ಮೀ ರೈಲ್ವೆ ವಿದ್ಯುದೀಕರಣ ಆಗಿತ್ತು. ಈ ಅವಧಿಯಲ್ಲಿ 3500 ಕಿ. ಮೀ ರೈಲ್ವೆ ವಿದ್ಯುದೀಕರಣ ಆಗಿದೆ. ರಾಷ್ಟ್ರೀಯ ಹೆದ್ದಾರಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 65 ವರ್ಷದಲ್ಲಿ 6500 ಕೀ. ಮೀ ಅಭಿವೃದ್ಧಿ ಮಾಡಲಾಗಿತ್ತು. ಈ ಅವಧಿಯಲ್ಲಿ 13000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡೆಸಿದ್ದಾರಲ್ಲದೆ ರಾಜ್ಯಕ್ಕೆ ಸ್ಮಾರ್ಟ್ ಸಿಟಿ, ಹೈವೆ, ರೈಲ್ವೆ, ಕೈಗಾರಿಕೆಗಳನ್ನು ನೀಡಿರುವುದು ಸಿದ್ಧರಾಮಯ್ಯ ಅವರು ಮರೆತಂತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya

ಬೆಳ್ತಂಗಡಿ: ನಿವೃತ್ತ ಮೆಸ್ಕಾಂ ಉದ್ಯೋಗಿ ಸಂಜೀವ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವಿರುದ್ಧ ಕೇಸು ದಾಖಲು: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡನೆ

Suddi Udaya

ಗಡಾಯಿಕಲ್ಲಿಗೆ ಸಿಡಿಲು ಬಡಿದು ಕಾಣಿಸಿಕೊಂಡ ಬೆಂಕಿ

Suddi Udaya

ಉಜಿರೆ: ಕಾಶಿಬೆಟ್ಟು ಬಳಿ ರಸ್ತೆಯ ಮೋರಿಗೆ ಡಿಕ್ಕಿ ಹೊಡೆದ ಬೋಲೆರೋ ವಾಹನ

Suddi Udaya

ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹ

Suddi Udaya
error: Content is protected !!