25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

ಕುವೆಟ್ಟು: ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಗಲೀಕರಣ ಹೆದ್ದಾರಿಯ ಕೆಲಸ ನಡೆಯುತ್ತಿದ್ದು ಮದ್ದಡ್ಕ ಪೇಟೆಯಲ್ಲಿ ಚರಂಡಿಯ ಕೆಲಸವನ್ನು ಸಂಪೂರ್ಣಗೊಳಿಸದೆ ಕಳೆದ ಒಂದು ತಿಂಗಳ ಹಿಂದೆ ಸ್ತಗಿತಗೊಳಿಸಿದ್ದು ಪೇಟೆಯ ವರ್ತಕರಿಗೆ, ಬ್ಯಾಂಕ್, ಹೋಟೆಲ್ ಇನ್ನಿತರ ವ್ಯಾಪರಸ್ಥರಿಗೆ ಗ್ರಾಹಕರಿಗೆ ಪೇಟೆಯ ಜನತೆಗೆ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು ತಕ್ಷಣ ಕಾಮಗಾರಿಯನ್ನು ಪ್ರಾರಂಭ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕ ಮಾಡಿ ತಿಳಿಸಬೇಕು ಎಂದು ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾರವರಿಗೆ ಮನವಿ ನೀಡುವ ಮೂಲಕ ಫೆ 12 ರಂದು ಒತ್ತಾಯಿಸಲಾಯಿತು.

ತಕ್ಷಣ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡು 3 ದಿನಗಳಲ್ಲಿ ಮದ್ದಡ್ಕ ಪೇಟೆಯ‌ ಎಲ್ಲಾ ವ್ಯಾಪರಸ್ತರ ಸಭೆಯನ್ನು ಕರೆದು ತೊಂದರೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಅಬ್ಬೋನ್ ಮದ್ದಡ್ಕ. ಶ್ರೀ ದುರ್ಗಾ ಟ್ರೇಡರ್ಸ್ ನ ಮಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶೇಖರ್ ಶೆಟ್ಟಿ ಹೋಟೆಲ್ ದತ್ತಗುರು ಮದ್ದಡ್ಕ ವರ್ತಕರ ಸಂಘದ ಸದಸ್ಯರಾದ ವೈ ಕೆ ಸ್ಟೋರ್ ಇದರ ಮಾಲಕ ಯಾಕುಬ್ ಮತ್ತು ಉಮೇಶ್ ಕುಮಾರ್ ಮನು ಸ್ಟುಡಿಯೋ ಮದ್ದಡ್ಕ ಉಪಸ್ಥಿತರಿದ್ದರು.

Related posts

ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಶರೀಫ್ ಮೂಸ ಕುಂಞ ಮೃತ್ಯು

Suddi Udaya

ಬೆಳ್ತಂಗಡಿ: 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಬೆಳ್ತಂಗಡಿ : ಹಳೇಕೋಟೆ ಬಳಿ ಪಿಕಪ್ ಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ; ಮತ್ತೋರ್ವ ಗಂಭೀರ

Suddi Udaya

ನಿದ್ದೆ ಮಾತ್ರೆ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಲಾವಿದ ಮುಂಡಾಜೆಯ ಜಯರಾಂ ಕೆ. ಮೃತ್ಯು

Suddi Udaya

ಯುವ ಸಂಸತ್ತು ಸ್ಪರ್ಧೆ: ಇಳ೦ತಿಲ ನಿವಾಸಿ ಅರ್ಪಿತಾ ಎ. ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮಚ್ಚಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!