
ನಿಡ್ಲೆ: ಇಲ್ಲಿಯ ಬರೆಂಗಾಯ ವಣಸಾಯ ಎಂಬಲ್ಲಿ ಕುಂಭ ಸಂಕ್ರಮಣ ಫೆ.13 ರಂದು ವನದುರ್ಗಾರಾಧನೆ ಬ್ರಾಹ್ಮಣ ಸಂತರ್ಪಣೆ ಹಾಗೂ ವನಭೋಜನವು ಜರುಗಿತು.
ನಂತರ ಬರೆಂಗಾಯದ ಮಹಿಳೆಯರು ಮತ್ತು ಮಕ್ಕಳಿಂದ ಭಜನಾ ಕಾರ್ಯಕ್ರಮವು ನಡೆಯಿತು.


ಈ ಸಂದರ್ಭದಲ್ಲಿ ಬರೆಂಗಾಯ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು, ಸದಸ್ಯರು, ನೇಮೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು, ನಾಲ್ವಿಕೆಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ರಾತ್ರಿ ಪಾಂಡೀಲು ಮನೆಯಿಂದ ಭಂಡಾರ ಹಿಡಿದು ಕೊಡಂಗೆ ಸ್ಥಾನದಲ್ಲಿ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಹಾಗೂ ಮರುದಿನ ಕಲ್ಕುಡ ಗುಡ್ಡೆಯಲ್ಲಿ ಕಲ್ಕುಡ ವ್ಯಾಘ್ರ ಚಾಮುಂಡಿ ಹಾಗೂ ಸಹ ದೈವಗಳಿಗೆ ದೊಂಪದ ಬಲಿ ಉತ್ಸವ ನಡೆಯಲಿದೆ.












