April 7, 2025
ಗ್ರಾಮಾಂತರ ಸುದ್ದಿ

ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವಾರ್ಷಿಕ ಮಹಾಸಭೆ

ಅಂಡಿಂಜೆ: ಬೆಳ್ತಂಗಡಿ ತಾಲೂಕಿನ “ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಂಡಿಂಜೆ” ಇದರ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಪಂಚಾಯತ್ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಮಲ್ಲಿಕಾ ಇವರು ಒಕ್ಕೂಟದ ವರದಿಯನ್ನು ಹಾಗೂ ಜಮಾ ಖರ್ಚಿನ ವಿವರವನ್ನು ಸಭೆಯಲ್ಲಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.ನಿರ್ಗಮಿತ ಪದಾಧಿಕಾರಿಗಳು ನೂತನವಾಗಿ ಆಯ್ಕೆ ಆದ ಪದಾಧಿಕಾರಿಗಳಿಗೆ ಒಕ್ಕೂಟದ ದಾಖಲಾತಿಗಳನ್ನು ಹಸ್ತಾಂತರಿಸುವದರೊಂದಿಗೆ ಹೂಗುಚ್ಚ ನೀಡುವ ಮೂಲಕ ವೇದಿಕೆಗೆ ಬರಮಾಡಿಕೊಳ್ಳುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.

ಮಾದರಿ ಒಕ್ಕೂಟದ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ ವಾರ್ಷಿಕ ಕ್ರಿಯಾ ಯೋಜನೆ ಕರಡು ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್‌ ಇವರು ಸಂಜೀವಿನಿ ಕಾರ್ಯ ಕ್ರಮಗಳ ಬಗ್ಗೆ ಹಾಗೂ ವಾರ್ಷಿಕ ಕ್ರಿಯಾಯೋಜನೆ ಕುರಿತಂತೆ
ವಿಸ್ತ್ರತವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉತ್ತಮ ದಾಖಲಾತಿ ಹೊಂದಿದ ಸ್ವಸಹಾಯ ಗುಂಪು ಹಾಗೂ ಶಿಸ್ತಿನ ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು. ಅತಿಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾಯ೯ಕ್ರಮದಲ್ಲಿ ಪಂಚಾಯತ್ ನ ಮಾಜಿ ಅಧ್ಯಕ್ಷರು, ಉಪಾದ್ಯಕ್ಷರು, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಸ್ವಸಹಾಯ ಗುಂಪಿನ ಸದಸ್ಯರು, ಸಖಿಗಳು, ಎಫ್ ಎಲ್ ಸಿ ಆರ್ ಪಿ, ಎಲ್ ಸಿಆರ್ ಪಿ ಹಾಗೂ ಇತರೆ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

Related posts

ನೀತಿ ಸಂಹಿತೆ ಜಾರಿ: ಸೆ.21-25 ರೊಳಗೆ ಮಹಾಸಭೆ ನಡೆಸುವವರು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವಂತೆ ವಿನಂತಿ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ಗೆ “ಅತ್ಯುತ್ತಮ ಎನ್‌.ಜಿ.ಒ” ಪ್ರಶಸ್ತಿ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಸ್ವಚ್ಛತಾ ಅಭಿಯಾನ

Suddi Udaya

ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ನಾರಾವಿ ವಲಯದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಮೇ 28: ಕೊಕ್ಕಡದಲ್ಲಿ ಜೇಸಿ ವಲಯ 15 ರ ವಲಯಾಡಳಿತ ಸಭೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ