25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊರಿಂಜ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಭವ್ಯ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ಉರುವಾಲು: ಕೊರಿಂಜ ಪರಿವಾರ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.15 ರಿಂದ ಪ್ರಾರಂಭಗೊಂಡು ಫೆ.22 ರವರೆಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಇದರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಫೆ.16 ರಂದು ನಡೆಯಿತು.

ಕುಪ್ಪೆಟ್ಟಿ ಶ್ರೀ ಗಣೇಶ್ ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ನಂತರ ಕುಪ್ಪೆಟ್ಟಿ ಮಹಾಧ್ವಾರದಿಂದ ಹಸಿರು ಕಾಣಿಕೆ ಮೆರವಣಿಗೆಯ ಜೊತೆಗೆ ದೈವ ದೇವರ ಆಭರಣ ವೈಭವಯುತ ಭವ್ಯ ಮೆರವಣಿಗೆಯಲ್ಲಿ ಸಾಗಿತು.

ಹೊರೆಕಾಣಿಕೆಯಲ್ಲಿ ಉರುವಾಲು, ಕಣಿಯೂರು, ಬಂದಾರು, ಮೊಗ್ರು, ಇಳಂತಿಲ, ಕರಾಯ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಪುತ್ತಿಲ, ನಾಳ, ಮಚ್ಚಿನ ಮತ್ತು ಉಪ್ಪಿನಂಗಡಿ ವಿವಿಧ ಭಾಗದಿಂದ ಗ್ರಾಮಸ್ಥರು ಹೊರೆಕಾಣಿಕೆ ಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿಆಡಳಿತ ಮೊಕ್ತೇಸರ ಯೋಗಿಸ್ ಪೂಜಾರಿ ಕಡ್ತಿಲ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಸುನಿಲ್‌ ಗೌಡ ಅಣವು, ಆಡಳಿತ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಭಟ್ ವಾದ್ಯಕೋಡಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಉದಯ ಟಿ. ತಾಳಿಂಜ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಎಂಜಿರಪಲ್ಕೆ, ಆಡಳಿತ ಸಹ ಮೊಕ್ತಸರ ಸೇಸಪ್ಪ ರೈ ಮತ್ತು ಜನಾರ್ದನ ಗೌಡ ನಕಾಲು ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಪೊಸದೊಂಡಿ, ಜೊತೆ ಕಾರ್ಯದರ್ಶಿ ಗಣೇಶ್ ಬನಾರಿ, ಕಾರ್ಯಯಾಲ ಸಂಚಾಲಕ ವಾರಿಜ ಶೆಟ್ಟಿ, ವಿವಿಧ ಸಮಿತಿಯ ಸದಸ್ಯರು, ಊರವರು ಉಪಸ್ಥಿತರಿದ್ದರು.

Related posts

ತಾಲೂಕಿನ ಬಡ ಮುಸ್ಲಿಂರನ್ನು ಅಜ್ಮೀರ್‌ಗೆ ಕಳುಹಿಸುವ ಪಿತೂರಿ: ಮತದಾರರು ಜಾಗೃತರಾಗಬೇಕು: ಸಲೀಂ ಗುರುವಾಯನಕರೆ

Suddi Udaya

ಇಂದಬೆಟ್ಟುವಿನಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ

Suddi Udaya

ಕಾಪಿನಡ್ಕ ಜಿನ್ನಪ್ಪ ಪೂಜಾರಿ ಮರಳಿ ಕಾಂಗ್ರೇಸ್ ಗೆ ಸೇರ್ಪಡೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ 

Suddi Udaya

ಉಜಿರೆ ಶಾರದಾ ಮಂಟಪದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ದೀಪಾವಳಿಗೆ ಝಗಮಗಿಸಿದ ವೇಣೂರು

Suddi Udaya
error: Content is protected !!