April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು : ವಿಶ್ವವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆ

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಗ್ರಾಮ ಸಭೆ ಪಂಚಾಯತ್ ನ ಸಭಾಂಗಣದಲ್ಲಿ ಫೆ.16 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ಬೆಳಾಲು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ವಿದ್ಯಾಶ್ರೀನಿವಾಸ್ ಗೌಡರವರು ವಹಿಸಿದ್ದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರುಗಳಾದ ಸತೀಶ್ ಎಳ್ಳುಗದ್ದೆ, ಸುರೇಂದ್ರ ಗೌಡ ಸುರುಳಿ, ಕೃಷ್ಣಯ್ಯ ಆಚಾರ್ಯ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಬಾಯಿ ಹೆಚ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಉದ್ಘಾಟಿಸಿದ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ಇವರು ಕಾನೂನು ಅರಿವು ಬಗ್ಗೆ ಮಾಹಿತಿ ನೀಡಿದರು. ವಿಶೇಷ ಆಹ್ವಾನಿತರಾಗಿ ಬೆಳ್ತಂಗಡಿ ವಿಕಲಚೇತನರ ನೋಡೆಲ್ ಅಧಿಕಾರಿ ರತ್ನಾವತಿ, ಬೆಳ್ತಂಗಡಿ ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಜಯಾನಂದ, ವಿಕಲಚೇತನರ ತಾಲೂಕು ಸಂಯೋಜಕ ಜಾನ್ ಬ್ಯಾಪ್ತಿಷ್ಟ ಡಿಸೋಜ, ಬೆಳಾಲು ಗ್ರಾಮದ ಮಾಯಾ ಬೆಳಾಲು ಕೊಲ್ಪಾಡಿ ಪೆರಿಯಡ್ಕ ಶಾಲಾ ಮುಖ್ಯೋಪಾಧ್ಯಯರು ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಬೆಳಾಲು ಗಸ್ತು ಪೊಲೀಸ್ ಅಧಿಕಾರಿಗಳು ನಾಗರಾಜ ಹಾಗೂ ಹುಲಿರಾಜ ಮತ್ತು ಆರೋಗ್ಯ ಇಲಾಖೆಯ ಜ್ಯೋತಿ ಮತ್ತು ತೇಜು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯವರು ಕಾರ್ಯಕ್ರಮದ ಅನೇಕ ಯೋಜನೆಗೆ ಧನಸಹಾಯ ನೀಡಿದ ಧಾನಿಗಳು ಹಾಗೂ ಧರ್ಮಸ್ಥಳ ಕ. ರಾ. ರ ಸಾರಿಗೆ ನಿಗಮ ಧರ್ಮಸ್ಥಳ ಘಟಕದ ಚಾಲಕ – ನಿರ್ವಾಹಕರಾದ ಬೆಳಾಲು ಗ್ರಾಮದ ಯತೀಶ್, ಶ್ರೀನಿವಾಸ ಗೌಡ ಹಾಗೂ ಲೋಕೇಶ್, ಮೂಡಗೆರೆ ಘಟಕದ ಶ್ರೀ ರಾಘವೇಂದ್ರ, ವಸಂತ ಸಂತೋಷ, ಇಂದಬೆಟ್ಟು, ಉಜಿರೆ ಗ್ರಾಮ ಕಣಿಯೂರು ಗ್ರಾಮ ಧರ್ಮಸ್ಥಳ ಗ್ರಾಮ ಪಂಚಾಯತ್ ನ ವಿಕಲಚೇತನ ಗ್ರಾಮೀಣ ಪುನರ್ವಸತಿ ಸಂಯೋಜಕರು ಗಳು ಹಾಗೂ ಗ್ರಾಮದ ಹಿರಿಯ ನಾಗರಿಕರರು ವಿಕಲಚೇತನರ ಹಾಗೂ ಪಾಲಕರು ಪೋಷಕರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 60 ಜನ ವಿಕಲಚೇತನರಿಗೆ ತಲಾ 5 ಕೆಜಿ ಅಕ್ಕಿ ಕಿಟ್ ಹಾಗೂ 10 ಜನ ವಿಕಲಚೇತನ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡಲಾಯಿತು. ವಿಕಲಚೇತನರ ಸರ್ಕಾರಿ ಯೋಜನೆ ಕಾನೂನು ಮಾಹಿತಿ ನೀಡಲಾಯಿತು. ಸಾರಿಗೆ ನೌಕರರು ಹಾಗೂ ಹಿರಿಯ ನಾಗರಿಕರು, ಮುಖ್ಯ ಶಿಕ್ಷಕರುಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲಾ 2,000 ರೂ ನೀಡಲಾಯಿತು,

ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ವಿಕಲಚೇತನರ ಗ್ರಾಮೀಣ ಪುನರ್ವಸತಿ ಸಂಯೋಜಕ ಈರಣ್ಣ ಎಸ್ ಹೆಚ್. ಬೆಳಾಲು ಪ್ರಾಸ್ತಾವಿಕ ಭಾಷಣ ಹಾಗೂ ಧನ್ಯವಾದವಿತ್ತರು. ಪ್ರಮೀಳ ಸುರೇಶ್ ಇಂರ್ಬಿತ್ತಿಲ್ ನಿರೂಪಿಸಿದರು. ಗ್ರಾಮದ ಹಿರಿಯರ ಶುಭ ಹಾರೈಕೆಯಿಂದ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು. ಮಣಿಕಂಟ ಎರೇಂಜರ್ಸ ಸೌಂಡ್ಸ್ ,ಹಾಗೂ ಅರ್ಚನ್ ಸೌತೆಗದ್ದೆ ಇವರು ಶಾಮಿಯಾನದ ಸೇವೆಯನ್ನು ನೀಡಿದರು.

Related posts

ಬಾರ್ಯ, ತೆಕ್ಕಾರು ಪುತ್ತಿಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಧರ್ಮಸ್ಥಳ ದೊಂಡೋಲೆ ನಿವಾಸಿ ಸಂತೋಷ್ ಶೆಟ್ಟಿ ನಿಧನ

Suddi Udaya

ಉತ್ತರಾಖಂಡ ಹ್ರಾಸಿಕೇಶದಲ್ಲಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಗಂಗಪೂಜೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮತದಾನದ ಜಾಗೃತಿ

Suddi Udaya

ಬೆಳ್ತಂಗಡಿ ಹಾ.ಉ.ಸ.ಸಂಘದಿಂದ ಆರ್ಥಿಕ ನೆರವು

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya
error: Content is protected !!