ಮರೋಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅನುದಾನದಿಂದ ಸುಮಾರು ರೂ. 1.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕ್ರೂಕ್ರಬೆಟ್ಟು ಸರ್ಕಾರಿ ಶಾಲೆಯ ಕಟ್ಟಡದ ಲೋಕಾರ್ಪಣಾ ಸಮಾರಂಭದ ಮೊದಲ ಅಂಗವಾಗಿ ರಾಷ್ಟ್ರ ಧ್ವಜ ಕಟ್ಟೆ ಉದ್ಘಾಟನೆ ಕಾರ್ಯಕ್ರಮವು
ಫೆ.17ರಂದು ನಡೆಯಿತು.
ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ರಾಷ್ಟ್ರಧ್ವಜ ಕಟ್ಟೆ ಉದ್ಘಾಟಿಸಿ ಮಾತನಾಡಿ ಊರಿನ ದೇಗುಲ ಮತ್ತು ಶಾಲೆ ಬೆಳಗಿದರೆ ಗ್ರಾಮ ಬೆಳಗಿದ್ದಂತೆ.ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ಪುನರ್ ನಿರ್ಮಾಣಗೊಳಿಸಿದ ಈ ಊರಿನ ಜನತೆ ಹಾಗೂ ಊರವರ ಶ್ರಮವನ್ನು ಮೆಚ್ಚುವಂತದ್ದು ಎಂದರು.
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮರೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಜೈನ್, ಉಪಾಧ್ಯಕ್ಷ ಶುಭರಾಜ ಹೆಗ್ಡೆ, ಸದಸ್ಯರಾದ ಅಶೋಕ್ ಕೋಟ್ಯಾನ್, ಶ್ರೀಮತಿ ಯಶೋದಾ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಕಾರ್ಯದರ್ಶಿ ನಾರಾಯಣ ಉಚ್ಚೂರು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಮರೋಡಿ, ಮರೋಡಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ವಿಜಯ ಆರಿಗ ನಿಡ್ಡಾಜೆ, ನಿವೃತ್ತ ಶಿಕ್ಷಕ ಅಣ್ಣಪ್ಪ ಹೆಗ್ಡೆ, ಹಿರಿಯರಾದ ರವೀಂದ್ರ ಹೆಗ್ಡೆ ಉಚ್ಚೂರು,ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಯೋಗೀಂದ್ರ ಆಚಾರ್ಯ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುಖೇಶ್ ಹೆಗ್ಡೆ, ಶಾಲಾ ನಾಯಕಿ ಶಮ ಉಪಸ್ಥಿತರಿದ್ದರು.
ವಿವಿಧ ಆಟೋಟ ಸ್ಪರ್ದೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿವರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಫಲಾ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.