ಕಲ್ಮಂಜ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.17ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಂಚಾರಿ ಮತ್ತು ವಿಸ್ತರಣೆ, ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ವಿಶ್ವನಾಥ್ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ಲೈನ್ ಮ್ಯಾನ್ ಗಳು ಫೋನ್ ಕರೆಗಳನ್ನು ಸ್ವೀಕರಿಸದೇ ಇರುವುದನ್ನು ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಹಾಗೂ ಗುತ್ತು ಬೈಲ್ ನಲ್ಲಿ ತಂತಿಗಳು ಜೋತು ಬಿದ್ದಿರುವುದನ್ನು ತಿಳಿಸಿದರು.
ಶಾಲೆ ರಸ್ತೆಗಳ ಬಳಿ ಬ್ಯಾರಿಗೇಟ್ ವ್ಯವಸ್ಥೆಗೆ ಪಂಚಾಯತ್ ಗೆ ಮನವಿ ಮಾಡಿದರು. ಹಾಗೂ ಸಿದ್ದಬೈಲ್ ಶಾಲೆಯ ಬಳಿ ತಡೆಗೋಡೆ ವ್ಯವಸ್ಥೆ ಮಾಡಿಸುವುದರ ಬಗ್ಗೆ ಗ್ರಾಮಸ್ಥರು ಮನವಿ ಮಾಡಿಕೊಂಡರು.
ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ ಆನೆದಾಳಿ ಬೆಳೆಪರಿಹಾರದ ಮಾಹಿತಿಯನ್ನು ನೀಡಿದರು. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ನೀಡಿದರು.
ಮಾರ್ಗದರ್ಶಿ ಅಧಿಕಾರಿ ಮಾತನಾಡಿ ನಿಮ್ಮ ಗ್ರಾಮ ಮಟ್ಟದಲ್ಲಿರುವಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಗ್ರಾಮ ಸಭೆ ಬಹಳ ಅನುಕೂಲವಾಗುತ್ತದೆ. ಗ್ರಾಮ ಸಭೆಗೂ ಮುನ್ನ ವಾರ್ಡ್ ಸಭೆಗಳು ನಡೆಯುತ್ತದೆ, ವಾರ್ಡ್ ಸಭೆಯಲ್ಲಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಗ್ರಾಮ ಸಭೆಯಲ್ಲಿ ಮುಂದಿಟ್ಟು ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದು ಗ್ರಾಮ ಸಭೆಯ ಉದ್ದೇಶವಾಗಿರುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಕಾರ್ಯದರ್ಶಿ ಶ್ರೀಮತಿ ಸರೋಜಿನಿ ಕೆ., ಸದಸ್ಯರಾದ ರಾಧಾಕೃಷ್ಣ ಗೌಡ, ವರದಾಕ್ಷ ಆಚಾರ್ಯ, ಶ್ರೀಮತಿ ಲೀಲಾ, ಎಂ ಶ್ರೀಧರ, ಶ್ರೀಮತಿ ಸವಿತಾ, ಕೃಷ್ಣ ಮೂರ್ತಿ, ಪ್ರವೀಣ, ಶ್ರೀಮತಿ ಶೋಭವತಿ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಜಮಾ ಖರ್ಚಿನ ವಿವರವನ್ನು ಶ್ರೀಮತಿ ಸರೋಜಿನಿ, ಉದ್ಯೋಗ ಖಾತರಿ ವಿವರವನ್ನು ರಮೇಶ್, ಹಾಗೂ ಬೇಡಿಕೆಗಳ ವಿವರವನ್ನು ರುಕೇಶ್ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಝ್ ಕೆ. ಸ್ವಾಗತಿಸಿ, ಧನ್ಯವಾದವಿತ್ತರು.