25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

ಬೆಳ್ತಂಗಡಿ ತಾಲೂಕು ಬಳೆಂಜ ಗ್ರಾಮದ ತೆಂಕಕಾರಂದೂರಿನ ಶ್ರೀ ಪ್ರಶಾಂತ ಹಾಗೂ ಶ್ರೀಮತಿ ಲಾವಣ್ಯ ಅವರ ಎರಡನೇ ಪುತ್ರಿ ,ಏಳು ವರ್ಷ ಪ್ರಾಯದ ಕು.ಮಾನ್ಯ ಹುಟ್ಟಿನಿಂದಲೇ ಬುದ್ದಿಮಾಂದ್ಯ ಹಾಗೂ ವಿಕಲಚೇತನೆ. ಎಲ್ಲಾ ಕೆಲಸಗಳಿಗೂ ಇನ್ನೊಬ್ಬರನ್ನೇ ಅವಲಂಬಿತವಾಗಿರ ಬೇಕಾದಂತಹ ಸನ್ನಿವೇಶ.

ಇಂತಹ ಪರಿಸ್ಥಿತಿ ಯಲ್ಲಿ.ಉಜಿರೆ ಗ್ರಾಮ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರಾದ ವಿಪುಲ್ ಪೂಜಾರಿ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘವು , ಆ ವಿಕಲಚೇತನ ಮಗುವಿಗಾಗಿ ರೂ 19000/- ಮೌಲ್ಯ ದ ವಿಶೇಷ ವೀಲ್ ಚೇರ್ ನ್ನು ಇಂದು ಅವರ ಮನೆಗೆ ಹೋಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಧರ ಕೆ.ವಿ, ಪೂರ್ವಾಧ್ಯಕ್ಷರಾದ ನವೀನ್ ಚಂದ್ರ ಕಜೆಕಾರ್, ಕೋಶಾಧಿಕಾರಿ ಗಣಪತಿ ಭಟ್, ಸಂಚಾಲಕರಾದ ಪ್ರಕಾಶ್ ಹಾಗೂ ಉಜಿರೆ ಗ್ರಾಮ ದ ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಹಾಗೂ ಬಳೆಂಜ ಗ್ರಾಮದ ಪುನರ್ವಸತಿ ಕಾರ್ಯಕರ್ತೆ ಕು.ವಿನೋದ ಇವರುಗಳು ಉಪಸ್ಥಿತರಿದ್ದರು

Related posts

ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ”

Suddi Udaya

ಶಿಶಿಲ ಕಪಿಲ ನದಿಯಲ್ಲಿ ಒಮ್ಮೆಲೇ ಉಕ್ಕಿ ಹರಿದು ಬಂದ ಪ್ರವಾಹ: ಕಿಂಡಿಅಣೆಕಟ್ಟು ಮುಳುಗಡೆ- ದೇವಸ್ಥಾನದ ಒಳಗೆ ನುಗ್ಗಿದ ನೀರು

Suddi Udaya

ಜಲಪಾತ ವೀಕ್ಷಣೆ ಹಾಗೂ ಗಡಾಯಿಕಲ್ಲು ಚಾರಣಕ್ಕೆ ನಿರ್ಬಂಧ

Suddi Udaya

ಸರಕಾರಿ ಪ್ರೌಢಶಾಲೆ ನಡ – ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆ: ಶಾಲಾ ನಾಯಕಿ ಇಂಚಿತಾ, ಉಪ ನಾಯಕನಾಗಿ ಹೃತಿಕ್ ಆಯ್ಕೆ

Suddi Udaya

ಕಣಿಯೂರು ಗ್ರಾಮದ 03 ಜನ ವಿಶೇಷ ಚೇತನರಿಗೆ ಬ್ರೈಟ್ ಇಂಡಿಯಾ ಮದ್ದಡ್ಕ ವತಿಯಿಂದ ಸಾಧನ ಸಲಕರಣೆ ವಿತರಣೆ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಕುಣಿತ ಭಜನೆಯ ತರಬೇತಿ

Suddi Udaya
error: Content is protected !!