25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಮಲವಂತಿಗೆ: ಹಿರಿಯ ಕಂಬಳ ಓಟಗಾರ , ಸಾಧಕ ಕುದ್ಮಾನ್ ನಿವಾಸಿ ಲೋಕಯ್ಯ ಗೌಡ ನಿಧನ

ಮಲವಂತಿಗೆ : ಹಿರಿಯ ಕಂಬಳ ಓಟಗಾರ , ಸಾಧಕ , ಪ್ರಗತಿಪರ ಕೃಷಿಕ ಮಲವಂತಿಗೆ ಗ್ರಾಮದ ಕುದ್ಮಾನ್ ನಿವಾಸಿ ಲೋಕಯ್ಯ ಗೌಡ (70 ) ರವರು ನಿಧನರಾದರು.

ದ.ಕ , ಉಡುಪಿ ಜಿಲ್ಲೆಗಳಲ್ಲಿ ಹಲವಾರು ಕಂಬಳಗಳಲ್ಲಿ ಅಡ್ಡ ಹಲಗೆ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಲೋಕಯ್ಯ ಗೌಡ ಅವರು ಹಲವಾರು ಬಾರಿ ಪ್ರಥಮ ಸ್ಥಾನ ಪಡೆದಿದ್ದರು. ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಕಂಬಳ ಕ್ಷೇತ್ರದ ಗಣನೀಯ ಸೇವೆಯನ್ನು ಗುರುತಿಸಿ ಜಿಲ್ಲೆಯಾದ್ಯಂತ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದರು. ಪುರುಷ ಬಳಗವನ್ನು ಸ್ಥಾಪಿಸಿ , ಅದರ ಸ್ಥಾಪಕಧ್ಯಕ್ಷರಾಗಿ , ಇತ್ತೀಚಿನ ತನಕವೂ ತಂಡವನ್ನು ಮುನ್ನಡೆಸಿದ್ದರು. ಗ್ರಾಮದ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ದುಡಿದಿದ್ದ ಅವರು ಅತ್ಯಂತ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಲಕ್ಷ್ಮೀ , ಗಂಡು ಮಕ್ಕಳಾದ ನಾರಾಯಣ , ಸುರೇಶ್ , ಮುರಳೀಧರ್, ಹೆಣ್ಣು ಮಗಳಾದ ಸುಜಾತ ಸೇರಿದಂತೆ ಸಾವಿರಾರು ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Related posts

ಸಾಲಬಾಧೆ – ಕೃಷಿಯಲ್ಲಿ ನಷ್ಟ: ಮಲವಂತಿಗೆ ಬಾಡಿಗೆ ಮನೆಯಲ್ಲಿರಾಧೀಶ್ ಆತ್ಮಹತ್ಯೆ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಪಾಸ್ಕ ಕಾಲದ ನಲವತ್ತನೆ ಶುಭ ಶುಕ್ರವಾರದ ಶಿಲುಬೆಯ ಹಾದಿ ದೇವಗಿರಿಯಲ್ಲಿ ಸಂಪನ್ನ

Suddi Udaya

ಧರ್ಮಸ್ಥಳ: ಹೂತ ಮೃತದೇಹಗಳ ಅವಶೇಷ ಹೊರತೆಗೆಯುವ ಕಾರ್ಯ ; ಮೊದಲ ಸ್ಥಳದಲ್ಲಿ ಸಿಗದ ಅವಶೇಷಗಳು; ಮುಂದೆ ಜೆಸಿಬಿಯಿಂದ ಕಾರ್ಯಾಚರಣೆ -ಅನುಚೇತ್ ಹೇಳಿಕೆ

Suddi Udaya

ಭಾರತ್ ಅಟೋ ಕಾರ್‍ಸ್ ನಲ್ಲಿ ಮಾನ್ಸೂನ್ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ

Suddi Udaya
error: Content is protected !!