24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಬೆಳಾಲು: ಎರಡು ಗುಂಪುಗಳ ನಡುವೆ ಗಲಾಟೆ: ಪರಸ್ಪರ ಆರೋಪ ಹೊರಿಸಿ ಪೊಲೀಸರಿಗೆ ದೂರು

ಬೆಳಾಲು: ಇಲ್ಲಿಯ ನಿವಾಸಿ ವಿ. ಶೇಷ ಗೌಡ ಎಂಬುವರ ಮೇಲೆ ಆರೋಪಿಗಳಾದ ಶಶಾಂಕ್‌, ಜಯಂತ್ ಹಾಗೂ ಸ್ವಸ್ತಿಕ್‌ ಎಂಬವರುಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ ಘಟನೆ ಫೆ.18ರಂದು ನಡೆದಿದೆ.

ಬೆಳಾಲು ಗ್ರಾಮದ ನಿವಾಸಿ ವಿ. ಶೇಷಗೌಡ ಯಾನೆ ಚಿಂಟು (32) ಎಂಬವರ ದೂರಿನಂತೆ, ಫೆ.:18 ರಂದು ರಾತ್ರಿ ಮನೆಯಲ್ಲಿರುವಾಗ, ಆರೋಪಿಗಳಾದ ಜಯಂತ್‌ ಗೌಡ, ಸ್ವಸ್ತಿಕ್‌ ಶಶಾಂಕ್ ಎಂಬವರು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ವಿ. ಶೇಷ ಗೌಡರವರ ಬಾವ ಪ್ರದೀಪ್‌ ರವರನ್ನು ಕರೆದಿರುತ್ತಾರೆ. ಆಗ ವಿಶೇಷ ಗೌಡ ಹಾಗೂ ಪ್ರದೀಪ್‌ ಹೊರಗೆ ಬಂದಿದ್ದು, ಆರೋಪಿಗಳಾದ ಶಶಾಂಕ್‌, ಜಯಂತ್ ಹಾಗೂ ಸ್ವಸ್ತಿಕ್‌ ಎಂಬವರುಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದ್ದು, ನಂತರ ವಿಶೇಷ ಗೌಡ ಮನೆಯ ಹಂಚುಗಳಿಗೆ ಹಾನಿ ಮಾಡಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ವಿ. ಶೇಷ ಗೌಡ ಹಾಗೂ ಪ್ರದೀಪ್‌ ರವರು ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ, ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 11/2024 ಕಲಂ: 447,323,504,324,427,506 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡಿದ್ದು,

ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಾಲು ಗ್ರಾಮ ನಿವಾಸಿ ಸ್ವಸ್ತಿಕ್‌ ಜೆ (25) ಎಂಬವರು ನೀಡಿದ ಪ್ರತಿದೂರಿನಂತೆ, ಶಶಾಂಕ್‌ ಎಂಬವರುಗಳಿಗೆ ಫೆ.18 ರಂದು ರಾತ್ರಿ ಬೆಳಾಲು ಗ್ರಾಮದ ಓಣಿಯಾಲು ಎಂಬಲ್ಲಿ ಆರೋಪಿಗಳಾದ ವಿಶೇಷಗೌಡ ಯಾನೆ ಚಿಂಟು, ಪ್ರದೀಪ್‌, ವೈಶಾಕ್‌, ಸುರೇಶ್‌ ಹಾಗೂ ಪಝಲ್‌ ಎಂಬವರುಗಳು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ ಹಾಗೂ ಜೀವಬೆದರಿಕೆ ಒಡ್ಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಸ್ವಸ್ತಿಕ್‌ ಜೆ ಹಾಗೂ ಶಶಾಂಕ್ ರವರುಗಳು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ಪ್ರತಿದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 12/2024 ಕಲಂ: 143,147,148,324,323,504,506 ಜೊತೆಗೆ 149 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಬಸ್ಸು ಪಾಸು ವಿತರಣೆ

Suddi Udaya

ತೆಂಕಕಾರಂದೂರು: ಶ್ರೀರಾಗ ಸಂಗೀತ ಶಾಲೆ ಶುಭಾರಂಭ

Suddi Udaya

ಬಸ್ಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆಯೋರ್ವರು ಬಸ್ಸಿನಡಿಗೆ ಸಿಲುಕಿ ದಾರುಣ ಸಾವು

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

Suddi Udaya

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸೇವಾದಳದ ಕಾರ್ಯದರ್ಶಿಯಾಗಿ ಎಂ.ಕೆ. ಅಬ್ದುಲ್ ಸಮದ್ ಕುಂಡಡ್ಕ ನೇಮಕ

Suddi Udaya

ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್

Suddi Udaya
error: Content is protected !!