25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗುರುವಾಯನಕೆರೆಯಿಂದ ಧರ್ಮಸ್ಥಳ ಕನ್ಯಾಡಿ ತನಕ ಬಸ್ಸು ನಿಲ್ದಾಣಗಳ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ : ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಲಿಯೋ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ನಮ್ಮ ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಛವಾಗಿ ಹಾಗೂ ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ಎಸ್ ಡಿ ಎಮ್ ಎನ್ ಎಸ್ ಎಸ್ ಇವರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಿಂದ ಧರ್ಮಸ್ಥಳ ಕನ್ಯಾಡಿ ತನಕ ಒಟ್ಟು 13 ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಮಾಹಿತಿ ಫಲಕವನ್ನು ಅಳವಡಿಸಲಾಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ. ಉಮೇಶ್ ಶೆಟ್ಟಿ ಇವರು ಚಾಲನೆ ನೀಡಿದರು. ಸ್ವಚ್ಛ ಮತ್ತು ಸುಂದರ ಬಸ್ ನಿಲ್ದಾಣಕ್ಕಾಗಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ, ಕುವೆಟ್ಟು ಗ್ರಾಮ ಪಂಚಾಯತ್, ನಗರ ಪಂಚಾಯತಿ ಬೆಳ್ತಂಗಡಿ, ಗ್ರಾಮ ಪಂಚಾಯಿತಿ ಲಾಯಿಲ, ಗ್ರಾಮ ಪಂಚಾಯತಿ ಉಜಿರೆ, ಗ್ರಾಮ ಪಂಚಾಯತ್ ಧರ್ಮಸ್ಥಳ ಸರಕಾರಿ ಶಾಲೆ ಕನ್ಯಾಡಿ, ಇವರು ಸ್ವಚ್ಛತೆಗೆ ನೀರು ಸರಬರಾಜು ಮಾಡುವ ಮೂಲಕ ಸಹಕರಿಸಿದರು, ಸಾರ್ವಜನಿಕರು ಉಪಹಾರ ನೀಡುವ ಮೂಲಕ ಸಹಕರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷರಾದ ಲ. ಡಾ. ದೇವಿಪ್ರಸಾದ್ ಬೊಲ್ಮ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ಅನಂತ ಕೃಷ್ಣ, ಮಾಜಿ ಪ್ರಾಂತ್ಯ ಅಧ್ಯಕ್ಷ ಲ. ನಿತ್ಯಾನಂದ ನಾವರ, ಲಿಯೋ ಕ್ಲಬ್ ಅಧ್ಯಕ್ಷರಾದ ಅಪ್ಸರ ಗೌಡ, ಕಾರ್ಯದರ್ಶಿ ನಿರೀಕ್ಷಾ ನಾವರ, ಕೋಶಾಧಿಕಾರಿ ಅಭಿಜ್ಞಾ ಬೊಲ್ಮ, ಉಪಾಧ್ಯಕ್ಷರಾದ ಕರಣ್ ಪವರ್, ಲಿಯೋ ಕಾರ್ಯಕ್ರಮ ಸಂಯೋಜಕ ದೀಕ್ಷಿತ್ ನಿಡ್ಲೆ, ಎನ್ಎಸ್ಎಸ್ ಕಾರ್ಯಕ್ರಮ ಪ್ರಯೋಜಕ ನಿಕ್ಷೇಪ್ ನಾವರ, ಲಯನ್ ಸದಸ್ಯರು, ಲಿಯೊ ಸದಸ್ಯರು, ಎನ್ಎಸ್ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಬಿಜೆಪಿ ಪಕ್ಷದ ಕಚೇರಿಗೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ

Suddi Udaya

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ; ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಳ್ತಂಗಡಿಯಿಂದ 1500 ಮಂದಿ ಭಾಗಿ

Suddi Udaya

ಕಣಿಯೂರು ಅಶೋಕ್ ಕುಲಾಲ್ ರಿಂದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

Suddi Udaya

ಮಚ್ಚಿನ : ಬಳ್ಳಮಂಜ ಗಣೇಶ್ ಬಾಳಿಗ ನಿಧನ

Suddi Udaya

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

Suddi Udaya

ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ

Suddi Udaya
error: Content is protected !!