ಎಸ್ ಎ ಫ್ರೆಂಡ್ಸ್ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕ ಕಬಡ್ಡಿ ಪಂದ್ಯಾಟ

Suddi Udaya

ಪುಂಜಾಲಕಟ್ಟೆ : ಎಸ್ ಎ ಫ್ರೆಂಡ್ಸ್ ಇದರ ವತಿಯಿಂದ ಶಬ್ಬೀರ್ ಮಾಲಾಡಿ ಮತ್ತು ಅಕ್ಷಯ್ ಕಲ್ಲೆಗ ಟೈಗರ್ಸ್ ಪುತ್ತೂರು ಇವರ ಸ್ಮಾರನಾರ್ಥಕವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಬ್ಬಡಿ ಅಮೆಚೂರ್ ಅಸೋಶಿಯನ್ ಇವರ ಸಂಯೋಗದಲ್ಲಿ ಪುರುಷರ ಕಬ್ಬಡಿ ಪಂದ್ಯಾಟ ಬಂಗ್ಲೆಗುಡ್ಡೆ ಮೈದಾನ ಪುಂಜಾಲಕಟ್ಟೆಯಲ್ಲಿ ಫೆ. 18ರಂದು ನಡೆಯಿತು.


ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷ ರಮನಾಥ್ ರೈ ಅವರು ಹಾಗೂ ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷರಾದ ಕೆ ಗಂಗಾಧರ ಗೌಡ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎ ಫ್ರೆಂಡ್ಸ್‌ನ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಪಡ್ಪು ವಹಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ದೀಪ ಬೆಳಗಿಸಿದರು. ಸುಧಾಕರ್ ಖಂಡಿಗ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಬಂಟ್ವಾಳ ಇವರು ಕ್ರೀಡಾಂಗಣವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ತುಂಗಪ್ಪ ಬಂಗೇರ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಪಿಲತ್ತಬೆಟ್ಟು, ಶೈಲೇಶ್ ಕುಮಾರ್ ಕುರ್ತೋಡಿ ಮಾಜಿ ಸದಸ್ಯರು ಜಿಲ್ಲಾ ಪಂಚಾಯತ್ ಲಾಯಿಲ , ನಿತ್ಯಾನಂದ ಬಿ. ಸೂಪದ್ಮ ಮಾಲಾಡಿ, ಅರವಿಂದ ಜೈನ್ ಅಧ್ಯಕ್ಷರು ಕೃಷಿ ಪತ್ತಿನ ಸಹಕರಿ ಸಂಘ ಮಡಂತ್ಯರು, ವಿನ್ಸೆಂಟ್ ಡಿಸೋಜಾ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಮಡಂತ್ಯಾರು, ಶ್ರೀಮತಿ ಶಾರದಾ ಅಧ್ಯಕ್ಷರು ಗ್ರಾಮ ಪಂಚಾಯತ್ ಪಿಲಾತ್ತಬೆಟ್ಟು, ಸತೀಶ್ ಶೆಟ್ಟಿ ಕುರ್ಡುಮೆ ಉಪಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕ, ಮೆಹಬೂಬ್ ಅಧ್ಯಕ್ಷರು ಕಾರ್ಮಿಕ ಘಟಕ ಬೆಳ್ತಂಗಡಿ ನಗರ, ಹನೀಪ್ ಪುಂಜಾಲಕಟ್ಟೆ ಸದಸ್ಯರು ಗ್ರಾಮ ಪಂಚಾಯತ್ ಮಡಂತ್ಯಾರು, ಕಿಶೋರ್ ಕುಮಾರ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಮಡಂತ್ಯಾರ್, ಪುಷ್ಪಲತಾ ಸದಸ್ಯರು ಗ್ರಾಮ ಪಂಚಾಯತ್ ಪಿಲಾತ್ತಬೆಟ್ಟು, ಬೆನೆಡಿಕ್ಟಾ ಮಿರಾಂದ ಸದಸ್ಯರು ಗ್ರಾಮ ಪಂಚಾಯತ್ ಮಾಲಾಡಿ, ರಾಜಶೇಖರ್ ಶೆಟ್ಟಿ ಪಾರೆಂಕಿ, ವಿಕ್ಟರ್ ಅಧ್ಯಕ್ಷರು ವಲಯ ಕಾಂಗ್ರೆಸ್ ಪಿಲಾತ್ತಬೆಟ್ಟು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಿತ್ಯಾನಂದ ಬಿ. ಸುಪದ್ಮ ಮಾಲಾಡಿ, ಹಬೀಬ್ ಮಾಣಿ ಫಿಲೋಮಿನ ಕಾಲೇಜು ಪುತ್ತೂರು, ವಲೇರಿಯನ್ ಫ್ರಾಂಕ್ ಮಡಂತ್ಯಾರ್, ಕರುಣಾಕರ ಶೆಟ್ಟಿ ಉಮಾ ಮಹೇಶ್ವರಿ ಅಕಾಡೆಮಿ, ಡಾ. ನಿಯಾಜ್ ಪಣಕಜೆ, ಶ್ರೇಯಸ್ ಪೂಜಾರಿ, ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.


ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಪಂಚಮುಖಿ ಫ್ರೆಂಡ್ಸ್ ಓಡೀಲು, ದ್ವಿತೀಯ ಸುಲ್ತಾನ್ ಎಟೆ ಕಾರ್ಸ್ ಸುನ್ನತ್ ಕೆರೆ, ತೃತೀಯ ಉಮಾಮಹೇಶ್ವರಿ ಅಕಾಡೆಮಿ, ಚತುರ್ಥ ಫ್ರೆಂಡ್ಸ್ ಬೆಳಗಾಂ. ಪಡೆಯಿತು. ಉದಯಕುಮಾರ್ ಜೈನ್ ಕಟ್ಟೆಮನೆ ಪುಂಜಲಕಟ್ಟೆ ಹಾಗೂ ಹಾಜಿ ಲತಿಫ್ ಸಾಹೇಬ್ ಅಧ್ಯಕ್ಷರು ಸ್ಕೌಟ್ಸ್ ಗೈಡ್ಸ್ ಮಡಂತ್ಯಾರ್ ವಲಯ ಗೆದ್ದ ತಂಡಗಳಿಗೆ ಎಸ್ ಎ ಟ್ರೊಫಿಯನ್ನು ವಿತರಣೆ ಮಾಡಿದರು.

Leave a Comment

error: Content is protected !!