April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗ್ರಾ.ಪಂ. ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಬಗ್ಗೆ ಮಾರ್ಚ್ 1ರಿಂದ ರಾಜ್ಯಾದ್ಯಂತ ಪ್ರತಿಭಟನೆ: ಸಾರ್ವಜನಿಕ ಮಹತ್ವದ ವಿಚಾರದ ಬಗ್ಗೆ ವಿಧಾನಸಭೆ ಸಭಾಪತಿಯವರಿಗೆ ಪತ್ರ

ಬೆಳ್ತಂಗಡಿ: ಗ್ರಾಮ ಪಂಚಾಯಿತಿ ನೌಕರರು ತಮಗೆ ಆಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳಿದ್ದ ಜನರ ಸೇವೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಚೇರಿಯಲ್ಲಿ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವ ವರೆಗೂ ಮಾರ್ಚ್ 1ರಿಂದ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ತಿಳಿಸಿದ್ದಾರೆ.

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿ ಹಲವು ವರ್ಷಗಳಿಂದ ಸಂಘಟನೆಯ ಮೂಲಕ ಇಲಾಖೆಗೆ ಹಲವು ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಆದರೆ ಇಲಾಖೆಯು ನೌಕರರ ಮೂಲ ಬೇಡಿಕೆಗಳಾದ ಸಿ ಮತ್ತು ಡಿ ದರ್ಜೆಯ ಸ್ಥಾನಮಾನ, ವೇತನ ಶ್ರೇಣಿ ಆರೋಗ್ಯಭದ್ರತೆ ಅನುಮೋದನೆ ಆಗದಿರುವ ಬಗ್ಗೆ, ನೌಕರರಿಗೆ ಸೇವಾ ಭದ್ರತೆ, ಡಾಟಾ ಎಂಟ್ರಿ ಆಪರೇಟಿವ್ ಅನುಮೋದನೆ ಸಮಸ್ಯೆ, ಸಕಾಲದಲ್ಲಿ ಮುಂಬಡ್ತಿ ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಳನ್ನು ಈಡೇರಿಸದೆ ನೌಕರರನ್ನು ಹಗಲಿರಲಿಸಿಕೊಳ್ಳುತ್ತಿದ್ದು ನೌಕರರು ಶೋಷಣೆಗಳಿಗಾಗುತ್ತಿದ್ದಾರೆ ಅಲ್ಲದೆ ಆರೋಗ್ಯಭದ್ರತೆ ಇಲ್ಲದೆ ಒತ್ತಡದಿಂದ ಕಾರ್ಯನಿರ್ಸುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷ ದೂರಿದ್ದಾರೆ. ಗ್ರಾಮ ಪಂಚಾಯತ್ ನೌಕರರಿಗೆ ಕನಿಷ್ಠ ವೇತನದ ಬದಲು ಗ್ರಾಮೀಣ ಪಂಚಾಯತಿ ಇಲಾಖೆ ಅಡಿಯಲ್ಲಿ ಸಿ ಮತ್ತು ಡಿ ದರ್ಜೆಯ ವೇತನ ನಿಗದಿಪಡಿಸಬೇಕು ಆರೋಗ್ಯಭದ್ರತೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು, ಅನುಮೋದನೆಯಾಗದ ಎಲ್ಲಾ ನೌಕರರಿಗೆ ಅನುಮೋದನೆ ಒದಗಿಸುವುದು ಹಾಗೂ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಮುಂಬಡ್ತಿ ನೀಡಬೇಕೆಂದು ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಶಾಸಕ ಮಂಜುನಾಥ ಭಂಡಾರಿ ಯವರು ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ ಬೆಂಗಳೂರು ಇವರಿಗೆ ನೌಕರರ ನ್ಯಾಯದ ಬೇಡಿಕೆಯನ್ನು ಪರಿಶೀಲಿಸಲು ವಿಲಾಸ ಸಮಿತಿಯನ್ನು ನೇಮಿಸಿ ಸಮಿತಿಯ ವರದಿಯನ್ನಾಧರಿಸಿ ಸೂಕ್ತ ಕ್ರಮಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಮಂತ್ರಿಗಳನ್ನು ಒತ್ತಾಯಿಸಲು ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ಕೋರಿ ಮನವಿಯನ್ನು ನೀಡಿದ್ದಾರೆ.

Related posts

ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ಆಯ್ಕೆ

Suddi Udaya

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಮಂಗಲೋತ್ಸವ ಹಾಗೂ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಶ್ರೀ ಧ.ಮ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Suddi Udaya
error: Content is protected !!