April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ದಿವ್ಯಜ್ಯೋತಿ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ ಕಾರ್ಯಕ್ರಮ

ಕಾಯರ್ತ್ತಡ್ಕ : ಜೆ ಸಿ ಐ ಕೊಕ್ಕಡ ಕಪಿಲ ಘಟಕ ಇದರ ವತಿಯಿಂದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತ್ತಡ್ಕ ಇಲ್ಲಿನ ವಿದ್ಯಾರ್ಥಿಗಳಿಗೆ ಗೆಲುವಿಗೆ ಇನ್ನೊಂದೇ ಮೆಟ್ಟಿಲು ಎಂಬ ಶೀರ್ಷಿಕೆಯ ಅಡಿಯಲ್ಲಿ ಪರೀಕ್ಷೆ ಎದುರಿಸುವುದು ಹೇಗೆ ಎಂಬ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾದ ಜೆ ಸಿ ಐ ವಲಯ ತರಬೇತಿದಾರರಾದ ಜೆಸಿಐ ಸೀನಿಯರ್ ಪ್ರದೀಪ್ ಬಾಕಿಲ ನಡೆಸಿಕೊಟ್ಟರು.

ವೇದಿಕೆಯಲ್ಲಿ ಅಧ್ಯಕ್ಷರಾದ ಜೆ ಸಿ ಎಚ್‌ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ, ಮುಖ್ಯ ಅತಿಥಿಯಾದ ಸಿ| ದಿವ್ಯ ಮರಿಯಾ ಮುಖ್ಯೋಪಾಧ್ಯಾಯರು ಕಾಯರ್ತ್ತಡ್ಕ, ಕಾರ್ಯಕ್ರಮದ ನಿರ್ದೇಶಕರಾದ ಜೆ ಸಿ ಪಿ ಟಿ ಸೆಬಾಸ್ಟಿನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರಾದ ಜೆ ಸಿ ಜೆ ಎಫ್ ಎಂ ಕೆ ಶ್ರೀಧರ್ ರಾವ್, ಕೋಶಾಧಿಕಾರಿ ವಿದ್ಯೇಂದ್ರ ಹಾಗೂ ಪ್ರಿಯಾ ಜೆ ಅಮೀನ್, ಶಾಲೆಯ ಶಿಕ್ಷಕ ವೃಂದ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಜೆಸಿ ಜಾನ್ಸನ್ ವಿತರಿಸಿದರು. ಜೆಸಿ ವಾಣಿ ಜೆಸಿ ಶ್ರವಣ್ ವಾಚಿಸಿದರು. ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್ ಸ್ವಾಗತಿಸಿ, ಜೆ ಸಿ ಪಿಟಿ ಸೆಬಾಸ್ಟಿನ್ ಧನ್ಯವಾದವಿತ್ತರು.

Related posts

ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Suddi Udaya

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

Suddi Udaya

7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಭಾಷಾ ಕೈ ಬರಹದ ತರಬೇತಿ ಕಾರ್ಯಾಗಾರ

Suddi Udaya

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ.

Suddi Udaya
error: Content is protected !!