ಲಾಯಿಲ: ಅಲ್ ಬುಖಾರಿ ಜುಮಾ ಮಸೀದಿ ಕುಂಟಿನಿ ಇದರ ವಾರ್ಷಿಕ ಮಹಾ ಸಭೆಯು ಫೆ.26ರಂದು ಮಗರಿಬ್ ನಮಾಜ್ ಬಳಿಕ ಮದರಸ ಹಾಲ್ ನಲ್ಲಿ ಕೇಂದ್ರ ಕಮಿಟಿ ಅಧ್ಯಕ್ಷ ಬಿಎಮ್ ಅಬ್ದುಲ್ ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇಂದ್ರ ಸಮಿತಿಯ ಕಾರ್ಯದರ್ಶಿಗಳಾದ ಮೊಹಮ್ಮದ್ ಕೆಎಸ್ಆರ್ ಟಿಸಿ ಉಪಸ್ಥಿತರಿದ್ದರು. ಇಬ್ರಾಹಿಂ ಉಸ್ತಾದ್ ಅವರು ದುವಾ ಕಾರ್ಯಕ್ರಮ ನೆರವೇರಿಸಿ, ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ರವರು ವಾಚಿಸಿದರು. ಹಳೆ ಕಮಿಟಿಯನ್ನು ಬರ್ಕಾಸುಗೊಳಿಸಿ ಹೊಸ ಕಮಿಟಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಸನಾ, ಪ್ರಧಾನ ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್, ಉಪಾಧ್ಯಕ್ಷರಾಗಿ ಸುಲೈಮಾನ್ ಎ.ಪಿ., ಇಲ್ಯಾಸ್ ನಾಡ್ಜೆ, ಕೋಶಾಧಿಕಾರಿಯಾಗಿ ರಹೀಮ್ ಪುನರಾಯ್ಕೆಗೊಂಡರು.
ಸದಸ್ಯರುಗಳಾಗಿ ಸಲಿಮ್, ರಹೀಮ್ ಯು.ಕೆ, ಅಝೀಜ್ ಯು.ಕೆ, ಅಬುಸಲಿ ಎನ್.ಆರ್., ರಹಿಮಾನ್, ಇಸುಬು ಹಲೇಜಿ ಮಯ್ಯದ್ದಿ , ಅಶ್ರಫ್ , ಅಶ್ರಫ್ ಮೋನು, ಸಂಸುಂದ್ದಿನ್ ನಾಡ್ಜೆ, ಹನೀಫ್ , ಮುಸ್ತಫಾ , ಹಸನ್ , ಆಸೀಫ್ , ಆನ್ಸರ್ ಯು ಪಿ. ಆಯ್ಕೆಗೊಂಡರು.
ನೂತನ ಮದರಸದ ಕೆಲಸ ಕಾರ್ಯಗಳು ಆದಷ್ಟು ಬೇಗ ಪೂರ್ತಿಗೊಳಿಸಲು ದಾನಿಗಳ ಸಹಕಾರ ಕೇಳುವುದೆಂದು ತೀರ್ಮಾನಿಸಿ ಆದಷ್ಟು ಬೇಗ ಮದರಸ ಪೂರ್ತಿ ಗೊಳಿಸುವ ಪ್ರಯತ್ನ ಮಾಡುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಂಗ್ ಮೆನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.