ಬೆಳ್ತಂಗಡಿ : ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ತುಳುನಾಡ ದೈವಾರಾಧಕರ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭ ಫೆ.27 ರಂದು ನಡೆಯಿತು.
ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಸಮ್ಮೇಳನ ಉದ್ಘಾಟಿಸಿದರು.
ತುಳುನಾಡ ಪಾರಂಪರಿಕ ವಸ್ತು ಪ್ರದರ್ಶನ ಮಳಿಗೆಯ ಉದ್ಘಾಟನೆಯನ್ನು ಜನಪದ ವಿದ್ವಾಂಸರಾದ ಡಾ.ಗಣೇಶ್ ಅಮೀನ್ ಸಂಕಮಾರ್ ನೇರವೇರಿಸಿದರು.
ಹಾವೇರಿ ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್,ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ,ಗುರುವಾಯನಕೆರೆ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ,ಉದ್ಯಮಿ ರಮೇಶ್ ಭಂಡಾರಿ ಆದೇಲು,ಎಕ್ಸೆಲ್ ಕಾಲೇಜಿನ ಟ್ರಸ್ಟ್ ಸತೀಶ್ ಕುಮಾರ್ ಆರಿಗ,ಬೆಳ್ತಂಗಡಿ ವಿನಾಯಕ ರೈಸ್ ಮಿಲ್ ನ ಚಂದ್ರಕಾಂತ್ ಕಾಮತ್,ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಅನುವಂಶೀಕ ಆಡಳಿತ ಮೊಕ್ತೇಸರ ವಿಶ್ವೇಶ್ ಕಿಣಿ ಉಪಸ್ಥಿತರಿದ್ದರು.
ತುಳುನಾಡ ದೈವರಾಧಕರ ಮಹಾ ಸಮ್ಮೇಳನದ ಪ್ರಧಾನ ಸಂಚಾಲಕ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಸಂಜೆ ಸುವರ್ಣ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಪ್ರಭು ಮತ್ತು ಬಳಗದವರಿಂದ ಭಕ್ತಗಾನ ವೈಭವವು ನಡೆಯಿತು.