24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

ಹೊಸಂಗಡಿ : ಇಲ್ಲಿಯ ಹೊಸಂಗಡಿ ಎಂಬಲ್ಲಿ, ಕೆಎ 07 ಬಿ 5412 ನೇ ನೋಂದಣಿಯ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಫೆ.27ರಂದು ಮಧ್ಯಾಹ್ನ ಶ್ರೀಶೈಲ ಡಿ ಮುರಗೋಡ್‌ ಪಿಎಸ್‌ಐ (ಕಾ.ಸು) ವೇಣೂರು ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಕಾಶಿಪಟ್ಣ ಗ್ರಾಮದ ಮಣಿಕಂಠ ನಿವಾಸಿ ವಸಂತ(27ವ) ಎಂಬಾತನು, ಯಾವುದೇ ಪರವಾನಗಿ ಇಲ್ಲದೇ, ಎಲ್ಲಿಂದಲೋ ನದಿಯಿಂದ ಮರಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು , ಟಿಪ್ಪರ್‌ ಲಾರಿಯನ್ನು ಮರಳಿನ ಸಮೇತ ಸ್ವಾಧೀನಪಡಿಸಿಕೊಂಡು, ಅರೋಪಿಯ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ವಾಧೀನಪಡಿಸಿದ ಟಿಪ್ಪರ್‌ ಲಾರಿಯ ಅಂದಾಜು ಮೌಲ್ಯ ರೂ 7 ಲಕ್ಷ ಹಾಗೂ 3 ಯೂನಿಟ್‌ ಮರಳಿನ ಅಂದಾಜು ಮೌಲ್ಯ ರೂ 8 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ.

Related posts

ಆ.11: ಮಡಂತ್ಯಾರಿನಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿ’ ಸೋಜ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರ

Suddi Udaya

ನಾವೂರು : ಕುಪ್ಲೊಟ್ಟು ನಿವಾಸಿ ಮೋನಪ್ಪ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ತಾಲೂಕು ಮಟ್ಟದ ಬಾಲಕರ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟ: ಬಂದಾರು ಪ್ರಾಥಮಿಕ ಶಾಲೆಗೆ ಪ್ರಶಸ್ತಿ

Suddi Udaya

ತುಂಬೆದಲೆಕ್ಕಿ ಶಿಲಾಮಯ ಭಜನ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

Suddi Udaya

ಜೂ.11: ಅಳದಂಗಡಿ ಸತ್ಯದೇವತೆ ದೈವಸ್ಥಾನದ ವತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ವಾಲಿಬಾಲ್ ಪಂದ್ಯಾಟ: ಧರ್ಮಸ್ಥಳದ ಸಿಂಚನಾ ಜೆ. ಶೆಟ್ಟಿ ಅತ್ಯುತ್ತಮ ಸೆಟ್ಟರ್ ಆಗಿ ಆಯ್ಕೆ

Suddi Udaya
error: Content is protected !!