24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯ 2023- 24ನೇ ಸಾಲಿನ ಪ್ರಥಮ ಹಂತದ ವಿಶೇಷ ಗ್ರಾಮ ಸಭೆಯು ಪ್ರಗತಿಪರ ಕೃಷಿಕರಾದ ಅಲೆಕ್ಸ್ ವೇಗಸ್ ರವರ ಅಧ್ಯಕ್ಷತೆಯಲ್ಲಿ ಫೆ.27ರಂದು ನಡೆಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸದಸ್ಯರಾದ ಸಂತೋಷ , ಚಂದ್ರಶೇಖರ್, ಸುಮಲತಾ, ಹರಿಣಾಕ್ಷಿ, ದೀಪಿಕಾ, ಜಯಲಕ್ಷ್ಮೀ, ಶಶಿಕಲಾ ರವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಆರ್ ಸಾಲಿಯಾನ್ ಸ್ವಾಗತಿಸಿ, ಹಿಂದಿನ ಸಭೆಯ ಅನುಪಾಲನಾ ವರದಿ ಓದಿದರು. ತಾಲೂಕು ಮಟ್ಟದ ವ್ಯವಸ್ಥಾಪಕರಾದ ಶ್ರೀಮತಿ ಜಯಲಕ್ಷ್ಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಪರಿಶೋಧನಾ ತಂಡದ ಸಂಪನ್ಮೂಲ ವ್ಯಕ್ತಿಗಳು ನರೇಗಾ ಹಾಗೂ 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ವರದಿಯನ್ನು ಸಭೆಗೆ ತಿಳಿಸಿದರು. ಪಂಚಾಯತ್ ಸಿಬ್ಬಂಧಿ ವರ್ಗ ಸಹಕರಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿ ಕುಮಾರಿ ಪ್ರಮೀಳಾ ವಂದಿಸಿದರು.

Related posts

ನಾರಾವಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಬೆಳಾಲು ಕೀನ್ಯಾಜೆ ನದಿಯಿಂದ ಅಕ್ರಮ ಮರಳು ಸಾಗಾಟ ಪತ್ತೆ

Suddi Udaya

ಕುಂಟಿನಿ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಡಿ.5: ವಿದ್ಯುತ್ ನಿಲುಗಡೆ

Suddi Udaya

ಪಾಲೇದು ಸ.ಹಿ.ಪ್ರಾ.ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಬೆಳ್ತಂಗಡಿ: ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿ ವಿರೋಧಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ

Suddi Udaya
error: Content is protected !!