25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ವೇಣೂರು: ಹಂದೇವ್ ನಲ್ಲಿ ಸಂಜೀವ ದೇವಾಡಿಗರವರಿಗೆ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಎಸ್ ಡಿ‌ ಎಮ್ ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ರವರಿಂದ ಹಸ್ತಾಂತರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸಮಾಜದ ಕಟ್ಟಕಡೆಯ ನಿರ್ಗತಿಕ ಅಸಹಾಯಕ ಕುಟುಂಬಗಳಿಗೆ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ವಾತ್ಸಲ್ಯ ಮನೆ ನಿರ್ಮಾಣ ಮಾಡುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಲಾಗುತ್ತಿದೆ.

ಇಂದು(ಫೆ.29) ವೇಣೂರು ಗ್ರಾಮದ ಹಂದೇವ್ ನಲ್ಲಿ ಸಂಜೀವ ದೇವಾಡಿಗ ರವರಿಗೆ ನಿರ್ಮಿಸಿ ಕೊಡಲಾದ ವಾತ್ಸಲ್ಯ ಮನೆಯನ್ನು ಎಸ್ ಡಿ‌ ಎಮ್ ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀಮತಿ ಶ್ರದ್ಧಾ ಅಮಿತ್ ರವರು ಹಸ್ತಾಂತರಿಸಿದರು.

ಮನುಷ್ಯ ಬದುಕಿನ ಉದ್ದಕ್ಕೂ ನೆಮ್ಮದಿಯಾಗಿ ಬದುಕಬೇಕು ಎಂದು ದುಡಿಮೆಯನ್ನು ಮಾಡುತ್ತಾನೆ. ವಾಸಕ್ಕೆ ಮನೆಯನ್ನು ನಿರ್ಮಿಸಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ. ಆದರೆ ಕೆಲವೊಂದು ಕುಟುಂಬಗಳಿಗೆ ನಾನಾ ಕಾರಣಗಳಿಂದಾಗಿ ತನ್ನ ಆಶಯದ ಗುರಿಗಳನ್ನು ಸಾಧಿಸಲು ಅಸಹಾಯಕರಾಗಿ ತಮ್ಮ ಬದುಕು ಶೋಷನಿಯ ಸ್ಥಿತಿಯಲ್ಲಿರುತ್ತದೆ‌. ಅಂತವರನ್ನು ಗುರುತಿಸಿ ತನ್ನ ಜೀವನದ ಕೊನೆಯ ಗಟ್ಟದಲ್ಲಿರುವ ಕುಟುಂಬಗಳಿಗೆ ತೀರಾ ಅವಶ್ಯಕತೆಯುಳ್ಳ ಮೂಲಭೂತ ವ್ಯವಸ್ಥೆಗಳನ್ನು ಯೋಜನೆಯ ವತಿಯಿಂದ 17873 ಕುಟುಂಬಗಳಿಗೆ ಮನೆ ನೀರು ಬೆಳಕು ಔಷಧಿ ಆಹಾರ ಶೌಚಾಲಯ ಗಳನ್ನು ನಿರ್ಮಿಸಿಕೊಡುವುದರೊಂದಿಗೆ ಷೋಷಕರನ್ನು ನಿಯೋಜನೆ ಮಾಡಿ ರಾಜ್ಯಮಟ್ಟದಲ್ಲಿ ವ್ಯವಸ್ಥೆ ಕಲ್ಪಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಪ್ರಶಂಸಿದರು.

ಅದರಲ್ಲಿ ಒಂದಾದ ಈ ಮನೆಯನ್ನು ಅತ್ಯುತ್ತಮ ವಾಗಿ ನಿರ್ಮಾಣ ಮಾಡಿ ನೀಡಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಯೋಜನೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್ ಎಸ್. , ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ತಾಲೂಕು ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಗಿರೀಶ್ ಮಹಿಳಾ ಜ್ಞಾನ ವಿಕಾಸದ ನಿರ್ದೇಶಕರಾದ ವಿಠಲ ಪೂಜಾರಿ, ಯೋಜನಾಧಿಕಾರಿಗಳಾದ ಶ್ರೀಮತಿ ಸಂಗೀತ ಶ್ರೀಮತಿ ಅಮೃತಾ, ತಾಲೂಕಿನ ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿಗಳಾದ ಶ್ರೀ ಗಿರೀಶ್ , ಸಮನ್ವಯಾಧಿಕಾರಿ ಶ್ರೀಮತಿ ಹರಿಣಿ, ವಲಯ ಮೇಲ್ವಿಚಾರಕರಾದ ಶ್ರೀಮತಿ ಶಾಲಿನಿ, ಸೇವಾ ಪ್ರತಿನಿಧಿ ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ದಯಾನಂದರವರು ಸ್ವಾಗತಿಸಿ, ವಂದಿಸಿದರು.

Related posts

ಪಂಜಿಕಲ್ಲು ಕಜೆಬೈಲು ಶ್ರೀ ಪಿಲಿಚಾಮುಂಡಿ ದೈವದ ನೇಮದ ಪ್ರಯುಕ್ತ: ಮಧ್ಯಯಕ್ಷಕೂಟದ ವತಿಯಿಂದ ತಾಳಮದ್ದಳೆ

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲೆಗೆ ಹಿದಾಯತುಲ್ಲಾ ಗೇರುಕಟ್ಟೆ ರವರಿಂದ ಮಿಕ್ಸರ್ ಗ್ರೈಂಡರ್ ಕೊಡುಗೆ

Suddi Udaya

ಕೊಲ್ಲಿ: ನೋಣಯ್ಯ ದೇವಾಡಿಗ ನಿಧನ

Suddi Udaya

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರಿಂದ ಮತದಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

Suddi Udaya
error: Content is protected !!