24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ : ಎಸ್.ಡಿ.ಪಿ.ಐ ಪಕ್ಷ ಸಮಾವೇಶ

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಪಕ್ಷ ಸಮಾವೇಶವು ಮಾ.1ರಂದು ಬೆಳ್ತಂಗಡಿ ಗುರುನಾರಾಯಣ ಭವನದಲ್ಲಿ ನಡೆಯಿತು.

ಬೆಳ್ತಂಗಡಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ ಮಾತನಾಡಿ ಎಸ್.ಡಿ.ಪಿ.ಐ. ಯು ಸಂವಿಧಾನ ಬದ್ಧವಾಗಿ ಬಂದಂತಹ ಪಕ್ಷವಾಗಿದ್ದು ನಾವೆಲ್ಲರೂ ಸಕ್ರೀಯವಾಗಿ ಭಾಗವಹಿಸಬೇಕು. ಪಂಚಾಯತ್ ಚುನಾವಣೆಗಳು ಅಥವಾ ಮುಂಬರುವ ಚುನಾವಣೆಗಳಿರಬಹುದು ನಮ್ಮ ಪಕ್ಷದ ಸದಸ್ಯರುಗಳನ್ನು, ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ಮಾತನಾಡಿ ಯಾವುದೇ ಸಾಮಾಜಿಕ ಕಾರ್ಯಕ್ರಮ, ಸಭೆಗಳಲ್ಲಿ ಅತ್ಯಂತ ಶಿಸ್ತಿನಲ್ಲಿ ಪಾಲ್ಗೊಳ್ಳುವ ಪಕ್ಷ ಎಸ್.ಡಿ.ಪಿ.ಐ., ಬೇರೆ ಬೇರೆ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಅವನತಿಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕೋಮುಗಲಭೆಗಳನ್ನು ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಕೂಡ ಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಬೆಳ್ತಂಗಡಿ ಎಸ್.ಡಿ.ಪಿ.ಐ ಉಪಾಧ್ಯಕ್ಷ ಅಬೂಬಕ್ಕರ್, ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವಮೆಂಟ್ ಅಧ್ಯಕ್ಷ ಶಾಮ ಮೊಹಮ್ಮದ್ ಅಲಿ, ಹನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ದ. ಕ. ಜಿಲ್ಲಾ ಸದಸ್ಯೆ ಸಫ ಸಲ್ಮಾ ಉಪಸ್ಥಿತರಿದ್ದರು.ಅಶ್ರಫ್ ಪುಂಜಾಲಕಟ್ಟೆ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಮದ್ದಡ್ಕ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

Suddi Udaya

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕ್ಕಾಗಿ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ: ಪ್ರತಾಪಸಿಂಹ ನಾಯಕ್

Suddi Udaya

ಪಡಂಗಡಿ : ತಿಮ್ಮಪ್ಪ ಜೆ ಪೂಜಾರಿ ನಿಧನ

Suddi Udaya

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಡಾನೆ ನಿರಂತರ

Suddi Udaya

ಖೋಖೋ ಪಂದ್ಯಾಟ: ಮುಂಡಾಜೆ ಶಾಲಾ ಶಿಕ್ಷಕಿ ಮಂಜುಳಾ ಹೆಚ್ ಹಾಗೂ ಕೊಕ್ಕಡ ಶಾಲಾ ಶಿಕ್ಷಕಿ ನೇತ್ರಾವತಿ ಎ.ಎಸ್ ರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ ರಿಗೆ ರೂ.19.90 ಲಕ್ಷ ವಂಚನೆ

Suddi Udaya
error: Content is protected !!