23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಓಡಿಲ್ನಾಳ: ಮೈರಲ್ಕೆ ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರರ ಪ್ರಾಯೋಜಕತ್ವದಲ್ಲಿ “ಕುಮಾರ ವಿಜಯ” ಯಕ್ಷಗಾನ ಹಾಗೂ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆಸಲ್ಲಿಸಿದ ಕರಸೇವಕರಿಗೆ ಗೌರವಾರ್ಪಣೆ

ಓಡಿಲ್ನಾಳ: ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ಮೈರಲ್ಕೆ ಓಡಿಲ್ನಾಳ ಇದರ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರರ ಪ್ರಾಯೋಜಕತ್ವದಲ್ಲಿ ಫೆ 29 ರಂದು ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಕುಮಾರ ವಿಜಯ (ಶೂರ ಪದ್ಮಾಸುರ ಕಾಳಗ) ಯಕ್ಷಗಾನ ಹಾಗೂ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರಾದ ಸಮಯದಲ್ಲಿ ದಿನ ನಿತ್ಯ ಕರಸೇವಕರಾಗಿ ಶ್ರಮದಾನದಲ್ಲಿ ಬಾಗಿಯಾದವರನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಮತ್ತು ಓಡಿಲ್ನಾಳ ಧರ್ಮೋಸ್ಥಾನ ಟ್ರಸ್ಟ್ (ರಿ) ಮೈರಲ್ಕೆ ಇವರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಜರಗಿತು.

ರಾತ್ರಿ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಚೌಕಿ ಪೂಜೆ ಜರಗಿತು. ಕಾರ್ಯಕ್ರಮದಲ್ಲಿ ಡಾ| ರಾಜರಾಮ್ ಉಪ್ಪಿನಂಗಡಿ. ಮನೋಹರ ಕುಮಾರ್ ವಕೀಲರು ಬೆಳ್ತಂಗಡಿ. ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್. ಧರಣೇಂದ್ರ ಕುಮಾರ್. ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಮ್ , ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಮಂಗಳೂರು ಕೋಶಾಧಿಕಾರಿ ಪದ್ಮರಾಜ್ ಆರ್ ., ಗೋಪಿನಾಥ್ ನಾಯಕ್ ಗುರುವಾಯನಕೆರೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಎಸ್ ಗಂಗಾಧರ್ ಭಟ್ ಕೆವುಡೇಲು, ಚಂದ್ರಹಾಸ್ ಕೇದೆ, ವ್ರಷಭ ಆರಿಗ ಆಡಳಿತ ಮೊಕ್ತೇಸರರು ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ, ಯಕ್ಷಗಾನ ಬಯಲಾಟ ಸಮಿತಿ ಸ್ಥಾಪಕಾಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರ್, ಅಧ್ಯಕ್ಷ ಸೋಮನಾಥ ಬಿ. , ಟ್ರಸ್ಟಿಗಳಾದ ಸತೀಶ್ ಪೊಕ್ಕಿ, ವೆಂಕಪ್ಪ ಗೌಡ, ಉಪಾಧ್ಯಕ್ಷರಾದ ಕೇಶವ ನಾಯ್ಕ್ ಬೊಳ್ಳಂತ್ತಾರು, ಪ್ರಭಾಕರ ಶಾಂತಿ ಕೋಡಿ, ಹರಿಪ್ರಸಾದ್ ಇರ್ವತ್ರಾಯ ತಂಗೋಯಿ, ಅನಂತ್ ಎಸ್ ಇರ್ವತ್ರಾಯ ತಂಗೋಯಿ, ಅರುಣ ಶೆಟ್ಟಿ ಮಠ, ಮೋಹನ ಶೆಟ್ಟಿ ಕೆರೆಕಜೆ, ಶೇಖರ ಶಾಂತಿಕೋಡಿ, ಸುರೇಶ್ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿ ಅನೂಪ್ ಬಂಗೇರ ಮದ್ದಡ್ಕ, ಕಾರ್ಯದರ್ಶಿಗಳಾದ ವಿಜಯ ಕೊಂಡೆಮಾರ್. ದೇಜಮ್ಮ ಕೆರೆಕೊಡಿ, ಮಾಲತಿ ನಾನಾಡಿ, ಸುಧಾ ಶೆಟ್ಟಿ ಮೈರಲ್ಕೆ, ಗುಲಾಬಿ ಭದ್ರಕಜೆ, ಶಾಲಿನಿ ಮಠ, ಲೀಲಾವತಿ ಮಡಂತಿಲ, ಶಶಿಕಲಾ ಕೆರೆಕಜೆ, ಕೋಶಾಧಿಕಾರಿ ಸತೀಶ್‌ ಪೊಕ್ಕಿ, ಸದಸ್ಯರಾದ ರಾಘವೇಂದ್ರ ಗೌಡ ಕರ್ನಂತ್ತೋಡಿ . ಶಿವಪ್ಪ ನಾಯ್ಕ ರೇಷ್ಮೆ, ಹರೀಶ್ ನಾಯ್ಕ್ ರೇಷ್ಮೆ, ನಾಗೇಶ್ ಪೂಜಾರಿ ಅದೇಲು,ಸತೀಶ್ ಬನ ,ರಾಜೇಶ್ ಶೆಟ್ಟಿ ಅಶ್ವಥ ನಗರ ಮತ್ತಿತರರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.189 ಕೋಟಿ ವಾರ್ಷಿಕ ವ್ಯವಹಾರ,ರೂ.23 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 14 ಡಿವಿಡೆಂಟ್

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಬಿಸಿಎ ವಿಭಾಗದಿಂದ ಎನಿಗ್ಮಾ-2024

Suddi Udaya

ಕೊಕ್ಕಡ : ಮುಂಡೂರುಪಳಿಕೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!