32.3 C
ಪುತ್ತೂರು, ಬೆಳ್ತಂಗಡಿ
September 19, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿ

ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಾ ಮೇಲೆ ಕಾಡುಕೋಣ ದಾಳಿ: ರಿಕ್ಷಾದಲ್ಲಿದ್ದ ಪುತ್ರ ದಿಲ್ಸನ್ ಗೆ ಗಾಯ ತಂದೆ ಡೆನ್ನಿಸ್ ಅಪಾಯದಿಂದ ಪಾರು

ಪುದುವೆಟ್ಟು: ಕಾಡುಕೋಣವೊಂದು ರಿಕ್ಷಾ ಮೇಲೆ ದಾಳಿ ನಡೆಸಿ ಬಾಲಕ ಗಾಯಗೊಂಡ ಘಟನೆ ಪುದುವೆಟ್ಟಿನಲ್ಲಿ ನಡೆದಿದೆ.

ಧರ್ಮಸ್ಥಳ-ಮುಂಡಾಜೆ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ದಡಪಿತ್ತಿಲು ಎಂಬಲ್ಲಿ ಮಾರ್ಚ್ 2 ರಂದು ರಾತ್ರಿ ಸುಮಾರು ಗಂಟೆ 8:30 ಗಂಟೆಗೆ ಧರ್ಮಸ್ಥಳದಿಂದ ಬೊಮ್ಮನಾರು ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕರಾದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ವಡೆಕ್ಕೆಲ್,ಬೊಲ್ಮನಾರು ನಿವಾಸಿ ಡೆನ್ನಿಸ್ (42) ಮತ್ತು ಮಗ ದಿಲ್ಸನ್(15) ಎಂಬವರು ಹೋಗುವಾಗ ಆಟೋ ರಿಕ್ಷಾದ ಮೇಲೆ ಕಾಡುಕೋಣವೊಂದು ದಾಳಿ ಮಾಡಿ ಪಲ್ಟಿ ಮಾಡಿ ಜಖಂ ಮಾಡಿದೆ.ಈ ಘಟನೆ ವೇಳೆ ಆಟೋದಲ್ಲಿದ್ದ ದಿಲ್ಸನ್(15) ಎಂಬುವರಿಗೆ ತಲೆಗೆ ಗಾಯವಾಗಿದ್ದು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್‌ಗೆ ಸನ್ಮಾನ

Suddi Udaya

ಉಜಿರೆ: ರಾಜಗೃಹ ನಿವಾಸಿ ರಾಮಚಂದ್ರ ಭಟ್ ತಂತ್ರಿ ನಿಧನ

Suddi Udaya

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೇಷ ಜಾತ್ರೆಗೆ ಚಾಲನೆ

Suddi Udaya
error: Content is protected !!