April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಕುಲಾಲ್ ರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15 ರ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ ವಿಭಾಗದಲ್ಲಿ 1998 ರಲ್ಲಿ ಕರ್ನಾಟಕ ವಿದ್ಯುತ್ ಚಕ್ತಿ ಮಂಡಳಿಗೆ ಸೇರ್ಪಡೆಗೊಂಡು ಪ್ರಸ್ತುತ ಬೆಳ್ತಂಗಡಿ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಕುಲಾಲ್ ಇವರನ್ನು ಗೌರವಿಸಲಾಯಿತು.

ಜೆಸಿಐ ಬೆಳ್ತಂಗಡಿಯ ಮಹಿಳಾ ವಿಭಾಗದ ಸಂಯೋಜಕರಾದ ಜೆಸಿ ಶ್ರುತಿ ರಂಜಿತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ Dr. ವಿದ್ಯಾವತಿ, ನಿವೃತ್ತ ಸರಕಾರಿ ತಜ್ಞ ವೈದ್ಯರು, ಬೆಳ್ತಂಗಡಿ, ಲ.ಉಮೇಶ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ, ಶಂಕರ್ ರಾವ್, ವಲಯ ಉಪಾಧ್ಯಕ್ಷರು, ವಲಯ 15, ಜೆಸಿಐ ಭಾರತ, ಶ್ರೀಮತಿ ಶಾಂತ ಬಂಗೇರ, ಗೌರವಾಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ(ರಿ) , ಶ್ರೀಮತಿ ಸವಿತಾ ಜಯದೇವ, ಅಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ ), ಬೆಳ್ತಂಗಡಿ, ಶ್ರೀಮತಿ ಆಶಾ ಸತೀಶ್, ಅಧ್ಯಕ್ಷರು ಮಹಿಳಾ ವೃಂದ (ರಿ) ಬೆಳ್ತಂಗಡಿ, ಶ್ರೀಮತಿ ಪುಷ್ಪ ಗಿರೀಶ್, ಅಧ್ಯಕ್ಷರು ಪಂಚಶ್ರೀ ಭಜನಾ ಮಂಡಳಿ ಬಳಂಜ, ಶ್ರೀಮತಿ ಉಷಾ,ಸದಸ್ಯರು ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ಸ್ವಾಗತಿಸಿದರು. ವೇದಿಕೆ ಆಹ್ವಾನವನ್ನು ಘಟಕದ ಉಪಾಧ್ಯಕ್ಷರಾದ ಹೇಮಾವತಿ ಕೆ, ಜೆಸಿ ವಾಣಿಯನ್ನು ಘಟಕದ ಉಪಾಧ್ಯಕ್ಷರಾದ ಜೆಸಿ ಆಶಾ ಪ್ರಶಾಂತ್, ಸನ್ಮಾನ ಪತ್ರವನ್ನು ಕಾರ್ಯಕ್ರಮದ ಸಂಯೋಜಕರಾದ ಜೆಸಿ ಮಧುರ ರಾಘವ್ ವಾಚಿಸಿದರು. ಘಟಕದ ಕಾರ್ಯದರ್ಶಿಗಳಾದ ಅನುದೀಪ್ ಜೈನ್ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ನಮ್ಮ ಘಟಕದ ಪೂರ್ವಧ್ಯಕ್ಷರುಗಳಾದ ಜೆಸಿ ಸುಭಾಶ್ ಚಂದ್ರ M P, ಜೆಸಿ ಸಚಿನ್ ಕುಮಾರ್ ನೂಜೋಡಿ, ಜೆಸಿ ತುಕಾರಾಮ್, JFM ನಾರಾಯಣ ಶೆಟ್ಟಿ, JFM ಚಿದಾನಂದ ಇಡ್ಯಾ, JFP ವಸಂತ ಶೆಟ್ಟಿ ಶ್ರದಾ, ಜೆಸಿ HGF ಸಂತೋಷ ಪಿ ಕೋಟ್ಯಾನ್, ಜೆಸಿಐ Sen. ಕಿರಣ್ ಕುಮಾರ್ ಶೆಟ್ಟಿ, ಜೆಸಿ HGF ಪ್ರಶಾಂತ್ ಲಾಯಿಲ , JFM ಅಭಿನಂದನ್ ಹರೀಶ್ ಕುಮಾರ್, ಮಹಿಳಾ ಜೆಸಿ ಪೂರ್ವ ಅಧ್ಯಕ್ಷರುಗಳಾದ ಜೆಸಿ ಉಮಾ ರಾವ್, ಜೆಸಿ ಮಮತಾ ವಿಶ್ವನಾಥ್ ಶೆಟ್ಟಿ, ಜೆಸಿ ಹೇಮಾವತಿ, ಜೆಸಿ ಆಶಾ ಪ್ರಶಾಂತ್, ಜೆಸಿ ಮಾಮಿತಾ ಸುಧೀರ್ ಪದಾಧಿಕಾರಿಗಳು , ಸದಸ್ಯರುಗಳು, ಜೂನಿಯರ್ ಜೆಸಿ ಅಧ್ಯಕ್ಷರಾದ ಜೆಜೆಸಿ ಸಮನ್ವಿತ್ ಕುಮಾರ್ ಭಾಗವಹಿಸಿದರು.

Related posts

ದೈಹಿಕ ಶಿಕ್ಷಕ ಜೋನ್ ಕೆ ಪಿ ಸೇವಾ ನಿವೃತ್ತಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೀಳ್ಕೊಡುಗೆ ಸನ್ಮಾನ

Suddi Udaya

ಮಿತ್ತಬಾಗಿಲು : ಪೆರ್ದಾಡಿಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ವರ್ಷಾವಧಿ ಜಾತ್ರಾ ಮಹೋತ್ಸವ: ಹಸಿರು ಹೊರೆಕಾಣಿಕೆ, ಧ್ವಜಾರೋಹಣ

Suddi Udaya

ದ.ಕ. ಜಿಲ್ಲೆಯ ಹೆಚ್ಚಿನ ರೈತರಿಗೆ ಬೆಳೆ ಸಾಲ ಯೋಜನೆಯ ಸೌಲಭ್ಯ ತಲುಪುವಲ್ಲಿ ವಿಫಲ:ಅಗತ್ಯವಿರುವ ನಿಧಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ ಅವರಿಗೆ ಆಗ್ರಹ

Suddi Udaya

ಆ.14: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಅರಿವಿನ ದೀವಿಗೆ ಉಪನ್ಯಾಸ

Suddi Udaya

ಪುದುವೆಟ್ಟು: ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Suddi Udaya
error: Content is protected !!