23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಬೃಹತ್ ರಕ್ತದಾನ ಶಿಬಿರ

ನಾವೂರು: ಸರ್ವೋದಯ ಟ್ರಸ್ಟ್(ರಿ) ನಾವೂರು , ರೋಟರಿ ಕ್ಲಬ್ ಬೆಳ್ತಂಗಡಿ, ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ(ರಿ) ಕಾರ್ಕಳ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ (ರಿ) ಬಂಗಾಡಿ, ರಕ್ತನಿಧಿ ಕೇಂದ್ರ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಮತ್ತು ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾವೂರಿನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ಮಾ.3 ರಂದು ನಡೆಯಿತು.


ಕಾರ್ಯಕ್ರಮವನ್ನು ಬೆಳ್ತಂಗಡಿಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ।ಅನಂತ ಭಟ್ ಮಚ್ಚಿಮಲೆಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ರೋಟರಿ ಕ್ಲಬ್ ನಡೆಸುತ್ತಿರುವ ಜನಪರ ಕಾರ್ಯಗಳ ಕುರಿತು ಮಾಹಿತಿ ನೀಡಿದರು.


ಝೋನಲ್ ಲೆಫ್ಟಿನಂಟ್ ರೊ। ಯಶವಂತ ಪಟವರ್ಧನ್, ಕಾಯದರ್ಶಿಗಳಾದ ರೊ। ವಿದ್ಯಾಕುಮಾರ್ ಕಾಂಚೋಡು, ಬಂಗಾಡಿ ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಹರೀಶ್ ಮೊರ್ತಾಜೆ, ಸಿ.ಎ ಬ್ಯಾಂಕ್ ನಿರ್ದೇಶಕರಾದ ಎ.ಬಿ ಉಮೇಶ್ ಹತ್ಯಡ್ಕ ಹಾಗೂ ತನುಜಾ ಶೇಖರ್ ,ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಾದ ಡಾ। ಶ್ರೀರಾಮ್, ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆಂಟನಿ ಟಿ.ಪಿ, ಲಿಲ್ಲಿ ಆಂಟನಿ, ಡಾ। ಶಿವರಾಜ ಪಜಿಲ, ಡಾ। ಕವಿತಾ ಪ್ರದೀಪ್ ,ನಾವೂರು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುನಂದ, ಉಪಾಧ್ಯಕ್ಷರಾದ ಶ್ರೀಮತಿ ಮಮತಾ, ಪಂಚಾಯತ್ ನ ಪೂರ್ವಾಧ್ಯಕ್ಷರಾದ ಗಣೇಶ್ ಗೌಡ, ಸದಸ್ಯರಾದ ಹಸ್ಸೈನಾರ್, ಮಲವಂತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮೋಹನ್ ಕಾರಿಂಜ, ಮುಖ್ಯ ಶಿಕ್ಷಕಿ ಶ್ರೀಮತಿ ರೋಹಿಣಿ. ಕೆ.,ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರಾದ ಅಶ್ವಥ್ ಭಟ್ ಪಡ್ಪು,ಜಯಾನಂದ ಗೌಡ ಒಳಗುಡ್ಡೆ, ಅಶ್ವಥ್ ರಾಜ್ ಕಲ್ಲಾಜೆ, ಉಮೇಶ್ ಪ್ರಭು ನಾವೂರು, ಪ್ರಮೋದ್ ಬೆದ್ರಬೆಟ್ಟು, ಜನಾರ್ದನ ಗೌಡ ಕಡ್ತ್ಯಾರು, ಮಹೇಶ್ ಭಟ್ ಕುದ್ಪುಲ,ಕು।ವಸಂತಿ ನಡ, ಉಮೇಶ ಮಾಲೂರು, ಪ್ರವೀಣ್ ವಿ.ಜಿ.ಕನ್ಯಾಡಿ, ಅಶೋಕ್ ಆಚಾರ್ಯ, ಪ್ರಕಾಶ್ ಇಚ್ಚಿಲ, ಅಜಿತ್ ಆರಿಗ ನಡ, ದರ್ಣಪ್ಪ ಮೂಲ್ಯ ನಾವೂರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ ನೇಮಿರಾಜ ಆರಿಗರವರು ಸರ್ವೋದಯ ಟ್ರಸ್ಟ್ ನ ಕಾರ್ಯಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಟ್ರಸ್ಟ್ ನ ಸಂಚಾಲಕ ರೊ।ಡಾ।ಪ್ರದೀಪ್ ಇವರು ರಕ್ತದಾನದ ಮಹತ್ವವನ್ನು ತಿಳಿಸಿದರು.

ಶಾಸಕ ಹರೀಶ್ ಪೂಂಜರು ರಕ್ತದಾನವನ್ನು ಮಾಡುವುದರ ಮೂಲಕ ಯುವಕರಿಗೆ ಆದರ್ಶವನ್ನು ಮೆರೆದರು. ಹಿರಿಯರಾದ ಉಮೇಶ್ ಹತ್ಯಡ್ಕ ಇವರು ವೈದ್ಯರ ಸಲಹೆಯನ್ನು ಪಡೆದು ರಕ್ತದಾನವನ್ನು ಮಾಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದರು.

ಸುರೇಶ್ ಗೋಳಿದಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಕಾರಿಂಜರವರು ವಂದಿಸಿದರು.
ಈ ಶಿಬಿರದಲ್ಲಿ 156 ಯುನಿಟ್ ರಕ್ತವು ಸಂಗ್ರಹಗೊಂಡಿದ್ದು ಸಹಕರಿಸಿದ ಎಲ್ಲಾ ದಾನಿಗಳಿಗೂ ರೋಟರಿ ಕ್ಲಬ್ ವತಿಯಿಂದ ಬಟ್ಟೆಯ ಕೈಚೀಲವನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಸಮಾಜದ ಸಂಕಲ್ಪವನ್ನು ಮಾಡಲಾಯಿತು.

Related posts

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರಿಂದ ಮುಂಬಯಿ ಬಿಲ್ಲವ ಸಮುದಾಯ ಭವನ, ಗುರುಮಂದಿರ ಉದ್ಘಾಟನೆ

Suddi Udaya

ಕಳೆಂಜ: ಸ.ನಂ 309 ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ.ಎ ನೇತೃತ್ವದಲ್ಲಿ ವಿ.ಪ. ಸದಸ್ಯ ಐವನ್ ಡಿಸೋಜ ರವರಿಗೆ ಮನವಿ

Suddi Udaya

ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ: ಅದ್ವಿಕ ಕೆ.ಪಿ. ರವರಿಗೆ ಚಿನ್ನದ ಪದಕ

Suddi Udaya

ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಕ್ಲಸ್ಟರ್: ಅಧ್ಯಕ್ಷ ಹಫೀಝ್ ಚಿಬಿದ್ರೆ, ಪ್ರ. ಕಾರ್ಯದರ್ಶಿ ಸದಖತುಲ್ಲಾ ದಾರಿಮಿ, ಕೋಶಾಧಿಕಾರಿ ರಫೀಕ್ ಹಾಜಿ

Suddi Udaya
error: Content is protected !!