March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

ಕೊಯ್ಯೂರು : ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೆರಲ್ ಕೊಯ್ಯೂರು ಇಲ್ಲಿಯ ಸದಸ್ಯರ ಕುಣಿತ ಭಜನೆಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ತಂದು ಕುಣಿತದಲ್ಲಿ ಒಂದು ಮಾದರಿ ತಂಡವನ್ನಾಗಿ ರೂಪಿಸಬೇಕೆನ್ನುವ ಉದ್ದೇಶದಿಂದ ಭಜನಾ ಮಂಡಳಿಯ ಹಿರಿಯ ಕಿರಿಯ ಸದಸ್ಯರುಗಳಿಗೆ ಮತ್ತು ಮಕ್ಕಳಿಗೆ ಕುಣಿತ ಭಜನೆಯ ಹೊಸ ತರಬೇತಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಣಿತ ಭಜನೆಯ ಗುರುಗಳಾದ ಸಂದೇಶ ಹಾಗೂ ಊರಿನ ಹಿರಿಯರು ಪ್ರಚಂಡಭಾನು ಭಟ್ ಪಾಂಬೆಲು ಇವರುಗಳು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಗಳು, ಭಜನಾ ಮಂಡಳಿಯ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ಭಜಕ ಆಸಕ್ತ ಸದಸ್ಯರುಗಳು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

Related posts

ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ದೇವಿಗೆ ಧೃಡಕಲಶ: ಅಭಿನಂದನಾ ಸಭೆ

Suddi Udaya

ಮಂಗಳೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಯುವ ಘಟಕ ಮಂಗಳೂರು ಕೋಶಾಧಿಕಾರಿಯಾಗಿ ಚೇತನ್ ಕೆಂಗುಡೇಲು

Suddi Udaya

ಕರಿಮಣೇಲು ಬಳಿ ರಾಜ್ಯ ಹೆದ್ದಾರಿಗೆ ಉರುಳಿ ಬಿದ್ದ ಮರ

Suddi Udaya

ಮಚ್ಚಿನ: ಮನೆಗೆ ಮರ ಬಿದ್ದು ಹಾನಿ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಮಹಾಸಭೆ: ಆಡಳಿತ ಮಂಡಳಿಗೆ ಮತದಾನ; 11 ಮಂದಿ ನಿರ್ದೇಶಕರ ಆಯ್ಕೆ

Suddi Udaya

ವೇಣೂರು ವಲಯದಲ್ಲಿ ಧರ್ಮಸ್ಥಳ ಲಕ್ಷ ದೀಪೋತ್ಸವದ ಪಾದಯಾತ್ರೆ ಸಮಾಲೋಚನಾ ಸಭೆ ಮತ್ತು ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!