23.3 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ

ಇಂದಬೆಟ್ಟು : ಇಲ್ಲಿಯ ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆಯು ಮಾ.4ರಿಂದ ಪ್ರಾರಂಭಗೊಂಡು ಮಾ7ರವರೆಗೆ ವೇದಮೂರ್ತಿ ಶ್ರೀಕಾಂತ ಭಟ್ ಬೆಳುವಾಯಿ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಮಾ.4ರಂದು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ತೊಡರ ಬಲಿ, ಉಗ್ರಾಣ ಮೂಹೂರ್ತ ನಡೆಯಿತು. ಮಾ.5ರಂದು ಬೆಳಿಗ್ಗೆ ಉಳ್ಳಾಕುಳ ಸನ್ನಿಧಿಯಲ್ಲಿ ನವಕ ಕಲಶ, ಪ್ರಧಾನ ಹೋಮ, ಧ್ವಜಾರೋಹಣ, ಕಲಶಾಭಿಷೇಕ, ಪಂಚವರ್ಣ ಸಂಕ್ರಾಂತಿ 12 ತೆಂಗಿನಕಾಯಿಗಳ ಗಣಹೋಮ, ಚಂಡಿಕಾ ಯಾಗ, ಮಹಾಪೂಜೆ, ನಂತರ ಅನ್ನಸಂತರ್ಪಣೆಯು ನಡೆಯಿತು.

ರಾತ್ರಿ ಉಳ್ಳಾಳ್ತಿ ಸನ್ನಿಧಿಯಲ್ಲಿ ಹೂವಿನ ಪೂಜೆ, ಉಳ್ಳಾಯ-ಉಳ್ಳಾಲ್ತಿ ನೇಮೋತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಅನುವಂಶಿಕ ಅಸ್ರಣ್ಣರು ಮತ್ತು ಪ್ರಧಾನ ಅರ್ಚಕ ಎಸ್. ಗೋಪಾಲಕೃಷ್ಣ ಉಪಾಧ್ಯಾಯ, ಆಡಳಿತ ಅಧಿಕಾರಿ ಗಿರಿಯಪ್ಪ ಗೌಡ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರೊನಾಲ್ಡ್ ಪಿಂಟೋ ನಿಧನ

Suddi Udaya

ಶೈಖುನಾ ಶಂಸುಲ್ ಉಲಮಾ 8ನೇ ವರ್ಷದ ಉರೂಸ್ ಹಾಗೂ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಭಾ.ಜ.ಪಾ ಬೆಳ್ತಂಗಡಿ ಮಂಡಲ ವತಿಯಿಂದ ಚುನಾವಣಾ ನಿರ್ವಹಣಾ ಸಮಿತಿಯ ಸಭೆ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಉಜಿರೆಯ ಅನುಷ್ಕಾ ಶೆಟ್ಟಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ಆಯೋಜಿಸಿದ್ದ ‘ಏಕತ್ವಮ್’ ಅಂತರ್ ತರಗತಿ ಫೆಸ್ಟ್ ನ ಸಮಾರೋಪ ಸಮಾರಂಭ

Suddi Udaya
error: Content is protected !!