25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.12: ಬೆಳ್ತಂಗಡಿ ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ) ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಮಹಿಳಾ ಒಕ್ಕೂಟ (ರಿ) ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ಸಾಂತ್ವನ ಕೇಂದ್ರ, ಬೆಳ್ತಂಗಡಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ, ಬೆಳ್ತಂಗಡಿ ಮಹಿಳಾ ವೃಂದ (ರಿ) ಬೆಳ್ತಂಗಡಿ, ಪ್ರಗತಿ ಮಹಿಳಾ ಮಂಡಲ (ರಿ) ಉಜಿರೆ ಸ್ಪೂರ್ತಿ ಮಹಿಳಾ ಮಂಡಲ, ಮೇಲಂತಬೆಟ್ಟು, ವೈಭವಿ ಮಹಿಳಾ ಮಂಡಲ, ಕುವೆಟ್ಟು ಲೇಡಿ ಜೆ.ಸಿ., ಜೆ.ಸಿ.ಐ. ಬೆಳ್ತಂಗಡಿ ಮಂಜುಶ್ರೀ ಇವರ ಸಹಭಾಗಿತ್ವದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ವಾಹನ ಜಾಥಾ ಮಾ.12 ರಂದು ಅಂಬೆಡ್ಕರ್ ಭವನ ದಿಂದ ಸುವರ್ಣ ಆರ್ಕೇಡ್ ವರೆಗೆ ನಡೆಯಲಿದೆ.

ಜಾಥಾ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ.

ದೀಪ ಪ್ರಜ್ವಲನೆಯನ್ನು ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪ್ರಿಯಾ ಆಗ್ನೆಸ್ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಸವಿತಾ ಜಯದೇವ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಜಿರೆ ದಂತ ವೈದ್ಯರು ಡಾ| ದೀಪಾಲಿ ಡೋಂಗ್ರೆ, ಸುವರ್ಣ ಆರ್ಕೇಡ್ ಮಾಲಕರು ನಾಣ್ಯಪ್ಪ ಪೂಜಾರಿ, ದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು ಅಧ್ಯಕ್ಷೆ ಶ್ರೀಮತಿ ಚಂಚಲ ತೇಜೋಮಯ ಭಾಗವಹಿಸಲಿರುವರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ಫಿಲಿಪ್ಸ್ ಅಫಿನಿಟಿ-70 ಅಲ್ಟ್ರಾ ಸೌಂಡ್ ಸೇವೆ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜನ್ಮದಿನ ಆಚರಣೆ

Suddi Udaya

ನಾವೂರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ವಸಂತ ಮರಕ್ಕಡ, ಕಾರ್ಯದರ್ಶಿಯಾಗಿ ನವೀನ್ ಬಿ.ಕೆ ಆಯ್ಕೆ

Suddi Udaya

ಜು.28: ಬೆಳ್ತಂಗಡಿ ತುಳುನಾಡ ಒಕ್ಕೂಟದ ವತಿಯಿಂದ ಚೆನ್ನೆಮಣೆ ಗೊಬ್ಬು ಹಾಗೂ ಸಂಧಿ ಪಾರ್ದನ ಸುಗ್ಗಿಪು

Suddi Udaya

ಅ.20 : ಬೆಳಾಲಿನಲ್ಲಿ ಯುವಸಿರಿ- ರೈತ ಭಾರತದ ಐಸಿರಿ: 5೦೦ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ನೇಜಿನಾಟಿ

Suddi Udaya
error: Content is protected !!