ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ: ರಂಗ ಮಂಟಪ ಲೋಕಾರ್ಪಣೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ, ದೇವರ ಪ್ರಭಾವಳಿ ಸಮರ್ಪಣೆ: ಇಂದು (ಫೆ.5) ನವ ಗುಳಿಗಗಳ ವಿಶೇಷ ಗಗ್ಗರ ಸೇವೆ

ವೇಣೂರು: ಶ್ರೀ ದುರ್ಗಾ ಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ 11ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾಚಂಡಿಕಾಯಾಗ, ರಂಗ ಮಂಟಪ ಲೋಕಾರ್ಪಣೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ, ದೇವರ ಪ್ರಭಾವಳಿ ಸಮರ್ಪಣೆಯ ಮೂಲಕ ಫೆ. 4ರಂದು ಚಾಲನೆ ನೀಡಲಾಯಿತು.

ನೂತನ ರಂಗಮಂದಿರದ ಉದ್ಘಾಟನೆಯನ್ನು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನೆರವೇರಿಸಿ ಶುಭ ಕೋರಿದರು.

ರಂಗ ಮಂಟಪ ಲೋಕಾರ್ಪಣೆ: ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನದಲ್ಲಿ ನಿರಂತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಕ್ಷೇತ್ರದ ಧರ್ಮದರ್ಶಿ ರಮೇಶ್ ಅವರು ಅವರ ಮಾತ- ಪಿತರ ಹೆಸರಿನಲ್ಲಿ ಸುಮಾರು ರೂ.೭ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಮತಿ ಗುಲಾಬಿ ಪೂಜಾರ್ತಿ ಮತ್ತು ದಿ. ಆದಪ್ಪ ಪೂಜಾರಿ ರಂಗ ಮಂಟಪವನ್ನು ಲೋಕಾರ್ಪಣೆಗೊಳಿಸಲಾಯಿತು.

ಇಂದು ಬೆಳಗ್ಗೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಶ, ಪಲ್ಲಪೂಜೆ, ಆದಿವಾಸ ಹೋಮ, ತುಲಾಭಾರ ಸೇವೆ, ಭಜನಾ ಕಾರ್ಯಕ್ರಮ, ವಿಶೇಷ ರಂಗಪೂಜೆ ಮತ್ತು ಮಹಾಪೂಜೆ ಪರಿವಾರ ದೈವಗಳ ಗಗ್ಗರಸೇವೆ, ಮೈಸಂದಾಯ, ದುಗಲಾಯ, ಪಂಜುರ್ಲಿ, ಮಂತ್ರದೇವತೆ, ಮೈಯಂತಿ, ಸನ್ಯಾಸಿ ಗುಳಿಗ, ಕೊರಗಜ್ಜ ದೈವಗಳ ಗಗ್ಗರಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಉದ್ಯಮಿ ಶುಭಕರ ಪೂಜಾರಿ ಸಾವ್ಯ, ಉದ್ಯಮಿ ರಾಜೇಶ್ ಪೂಜಾರಿ ಮೂಡುಕೋಡಿ, ಬ್ರಹ್ಮಕಲಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಸದಾಶಿವ ಹೆಗ್ಡೆ, ಗಂಗಾಧರ ವಾಸ್ತು ಶಿಲ್ಪಿ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರತ್ನಾಕರ ಬರ್ಕಜೆ, ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕುಲಾಲ್, ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜನಾರ್ಧನ್, ಗುರುವಾಯನಕೆರೆ ವೈಭವ ಹಾರ್ಡ್ವೇರ್ ಮಾಲಕ ಸೀತಾರಾಮ್ ಶೆಟ್ಟಿ, ರಮೇಶ್ ಪೂಜಾರಿ, ಯಶೋಧ ಆಚಾರ್ಯ ಮರೋಡಿ, ಜಿ.ಪಂ ಮಾಜಿ ಸದಸ್ಯ ಬಾಲಕೃಷ್ಣ ಬಾನಜಾಲು ನೆಲ್ಯಾಡಿ, ಗಣೇಶ್, ಸರ್ದಾರ್ ಬೆಂಗಳೂರು, ವಿಶ್ವನಾಥ ಪೂಜಾರಿ, ಶ್ರೀಮತಿ ಗುಲಾಬಿ ಆದಪ್ಪ ಪೂಜಾರಿ, ಧರ್ಮದರ್ಶಿ ರಮೇಶ್ ಬರ್ಕಜೆ, ಸುಧಾಕರ್ ಬರ್ಕಜೆ ಮೊದಲಾದವರು ಉಪಸ್ಥಿತರಿದ್ದರು.

(ಇಂದು) ನವ ಗುಳಿಗಗಳ ವಿಶೇಷ ಗಗ್ಗರ ಸೇವೆ
ಇಂದು (ಫೆ.5) ರಾತ್ರಿ ನವ ಗುಳಿಗಗಳ ವಿಶೇಷ ಗಗ್ಗರ ಸೇವೆ. ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

Related posts

ಬೆಳ್ತಂಗಡಿ : ಸಂತೆಕಟ್ಟೆ ಬಳಿ ಖಾಸಗಿ ಬಸ್ಸು ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ: ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

Suddi Udaya

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಧ್ವಜಾರೋಹಣ

Suddi Udaya

ಅಧಿವೇಶನದಲ್ಲಿ ವಿಪಕ್ಷ ಕೇಳಿದ ರಾಜ್ಯದ ಸಮಸ್ಯೆಗಳ ಪ್ರಶ್ನೆಗೆ ಸರಕಾರದಿಂದ ನಿರಾಶಾದಾಯಕ ಉತ್ತರ: ಸರಕಾರವು ಆರ್ಥಿಕ ದಿವಾಳಿಯ ಅಂಚಿನಲ್ಲಿದೆ ಎಂಬುದು ಸ್ಪಷ್ಟ: ಪತ್ರಿಕಾಗೋಷ್ಠಿಯಲ್ಲಿ ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಹೇಳಿಕೆ

Suddi Udaya

ಬೆಳ್ತಂಗಡಿ: ನಾಲ್ಕು ಮಂದಿಗೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ ಎಸ್ಐಟಿ

Suddi Udaya

ತಣ್ಣೀರುಪಂತ: ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಕೊಲ್ಯ-ಬೋಳ್ನಡ್ಕ ಕಾಂಕ್ರೀಟ್ ರಸ್ತೆ ನಿರ್ಮಾಣ ಪೂರ್ಣ

Suddi Udaya

ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!