24.8 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.8: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಯಿಂದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆ

ಬಳಂಜ : ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ (ರಿ.), ಬಳಂಜ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು, ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ ಶ್ರೀ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆಯು ಮಾ. 08 ರಂದು ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಜರುಗಲಿದೆ.

ಬೆಳಿಗ್ಗೆ ಗಂಟೆ 7-00ರಿಂದ ಗಣಹೋಮ, 7-30 ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಗುರು ಪೂಜೆ, 8-30ಕ್ಕೆ ಶ್ರೀ ಸರ್ವೇಶ್ವರೀ ದೇವಿಯ ಪೂಜೆ, 10-00 ಕ್ಕೆ ಪಂಚಶ್ರೀ ಮಹಿಳಾ ಭಜನಾ ತಂಡ ಬಳಂಜ ಮತ್ತು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ 11-00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ 12-30 ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ, ಉಜಿರೆ ಶ್ರೀ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್, ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಊರ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ ಸುವರ್ಣ, ಮುಂಡೂರು ಶ್ರೀನಾಗ ಕಲ್ಲುರ್ಟಿ ದೈವಸ್ಥಾನ ಆಡಳಿತ ಮೊಕ್ತಸರರು ರಾಜೀವ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಶ್ರೀಮತಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರು ಶೋಭಾ ಕುಲಾಲ್, ಯುವವಾಹಿನಿ ಕೇಂದ್ರ ಸಮಿತಿ (ರಿ.) ಮಂಗಳೂರು ಅಧ್ಯಕ್ಷ ಹರೀಶ್ ಪೂಜಾರಿ, ಬೈಲಬರಿ, ಮಂಗಳೂರು ಸೋಮೇಶ್ವರ ಪುರಸಭೆ ಸದಸ್ಯ ಜಯ ಪೂಜಾರಿ, ದರ್ಖಾಸು, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್ ಡಿ. ‘ಸುಧಾಮ’ ಬಳಂಜ ಭಾಗವಹಿಸಲಿದ್ದಾರೆ.

Related posts

ಡಿ. 7 :ಪದ್ಮುಂಜದಲ್ಲಿ ಮ್ಯಾರಥಾನ್ ಯೋಗ ತರಬೇತಿ ಶಿಬಿರ

Suddi Udaya

ಪಣಕಜೆ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

Suddi Udaya

ಅರಸಿನಮಕ್ಕಿಯಲ್ಲಿ 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

Suddi Udaya

ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರೊಂದಿಗೆ ಸಂವಾದ

Suddi Udaya

ಗರ್ಡಾಡಿಯಲ್ಲಿ ಮದಿರಾ ಗ್ರ್ಯಾಂಡ್ ಬಾರ್ ಆಂಡ್ ರೆಸ್ಟೋರೆಂಟ್ ಉದ್ಘಾಟನೆ

Suddi Udaya
error: Content is protected !!