ಮಾ.9: ಬಂಗಾಡಿ ಕೊಲ್ಲಿಯಲ್ಲಿ ಯುವ ನಾಯಕ ರಂಜನ್ ಜಿ ಗೌಡರವರ ಸಾರಥ್ಯದಲ್ಲಿ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ ಕಂಬಳ

Suddi Udaya

ಬಂಗಾಡಿ : ಕೊಲ್ಲಿ ಇಲ್ಲಿಯ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ – ಚಂದ್ರ ಜೋಡುಕರೆ ಬಯಲು ಕಂಬಳವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಯುವ ನಾಯಕ ರಂಜನ್ ಜಿ. ಗೌಡ ರವರ ಸಾರಥ್ಯದಲ್ಲಿ ಮಾ.9ರಂದು ಬೆಳಿಗ್ಗೆ 8-30ರಿಂದ ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಬಳದ ಉದ್ಘಾಟನೆಯನ್ನು ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ನೆರವೇರಿಸಲಿದ್ದು, ಸಭಾಧ್ಯಕ್ಷತೆಯನ್ನು ಕಾಜೂರು ಆರ್.ಜೆ.ಎಂ ಉಪಾಧ್ಯಕ್ಷ ಬಬ್ರುದ್ದೀನ್ ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಶಾಸಕರು,ಸಂಸದರು, ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ವಹಿಸಲಿದ್ದಾರೆ. ಹಾಗೂ ಅತಿಥಿಗಳಾಗಿ ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು, ಕಲಾ ಪ್ರೋತ್ಸಾಹಿಗಳು ಭಾಗವಹಿಸಲಿದ್ದಾರೆ.

ಬೆಳ್ತಂಗಡಿಯಲ್ಲಿ ಹೆಚ್ಚಾಗಿ ಕಂಬಳವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಕಂಬಳ ಆರಂಭವಾಗಿರುವ ಉದ್ದೇಶ ಮನರಂಜನೆ ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರ ಮನರಂಜನೆಗಾಗಿ ಆಚರಿಸಲಾಗುತ್ತಿತ್ತು, ಆದರೆ ಈಗ ಇದು ಕ್ರೀಡೆಯಾಗಿ ಬದಲಾವಣೆಗೊಂಡಿದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಜನರು ಬಿಡುವಿಲ್ಲದೆ ಹೊಲ-ಗದ್ದೆಯಲ್ಲಿ ದುಡಿದು ಧನಿವಿರುವಾಗ ಆಯಾಸವನ್ನು ನೀಗಿಸುವ ಸಲುವಾಗಿ ಅಂದರೆ ಮೊದಲ ಹಂತದ ಗದ್ದೆ ಕೃಷಿ “ಸುಗ್ಗಿ” ಬೇಸಾಯ ನಂತರ ಕಂಬಳವನ್ನು ಮಾಡಲಾಗುತ್ತದೆ.

ಈ ಬಾರಿಯ ಕಂಬಳದಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ, ಪ್ರಗತಿಪರ ಕೃಷಿಕ ದೇವರಾಯ ರಾವ್, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಇವರಿಗೆ ಗುರುತಿಸುವಿಕೆ ಕಾರ್ಯಕ್ರಮ ನಡೆಯಲಿದೆ.

Leave a Comment

error: Content is protected !!