September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಿಟ್ ಹಂಚುವ ವಿಚಾರದಲ್ಲಿ ಹೊಡೆದಾಟ: ಎರಡು ತಂಡಗಳಿಂದ ಪೊಲೀಸರಿಗೆ ದೂರು

ಮಿತ್ತಬಾಗಿಲು: ಇಲ್ಲಿಯ ಮಿತ್ತಬಾಗಿಲು ಗ್ರಾಮದ ಮಸೀದಿ ಬಳಿ ಕಿಟ್ ಹಂಚುವ ವಿಚಾರದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಎರಡು ಕಡೆಯವರು ಪರಸ್ಪರ ಆರೋಪ ಹೊರಿಸಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿ ಘಟನೆ ಮಾ.4ರಂದು ನಡೆದಿದೆ.


ಮಿತ್ತಬಾಗಿಲು ನಿವಾಸಿ ಅಶ್ರಫ್ ಎಂಬವರು ನೀಡಿದ ದೂರಿನಲ್ಲಿ ಮಾ.4 ರಂದು ಸಂಜೆ ಮಿತ್ತಬಾಗಿಲು ಗ್ರಾಮದ ಮಸೀದಿ ಬಳಿ ಲೈಟಿಂಗ್ ಕೆಲಸ ಮಾಡಿಕೊಂಡಿದ್ದಾಗ, ಸ್ಥಳಕ್ಕೆ ಬಂದ ಸಿನಾನ್ ಮತ್ತು ಅದ್ದು @ಅಬ್ದುಲ್ ರಹಿಮಾನ್ ಎಂಬವರುಗಳು ಕಿಟ್ ಹಂಚುವ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದು, ಕಬೀರ್ ಮತ್ತು ಚರಿಯಮೋನು ಮೈಲಾರ್ ಎಂಬವರುಗಳು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಶ್ರಫ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2024 ಕಲಂ: 504,506,324, 324, r/w 34 ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


ಈ ಪ್ರಕರಣದಲ್ಲಿ ಪ್ರತಿದೂರು ನೀಡಿರುವ ಶ್ರೀಮತಿ ಜೈನಾಬ್ ಅವರು ತಾಲಿ ಉಮ್ಮರ್, ಸಪ್ವಾನ್, ಸಿನಾನ್,ಆಸಿಫ್, ಹಕೀಂ, ಟಿ.ಎ ಮಹಮ್ಮದ್ ಮತ್ತು ಇತರರು ತನ್ನ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ನನಗೆ ಹಾಗೂ ನನ್ನ ಅಣ್ಣ ಅಬ್ದುಲ್ ರಹಿಮಾನ್ ಎಂಬವರಿಗೆ ಹಲ್ಲೆ ನಡೆಸಿ, ಅವ್ಯಾಚವಾಗಿ ಬೈದು, ಜೀವಬೆದರಿಕೆ ಹಾಕಿರುತ್ತಾರೆ ಎಂದು ಆರೋಪಿಸಿದ್ದಾರೆ. ಅವರು ನೀಡಿದ ದೂರಿನಂತೆ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 28/2024 ಕಲಂ: 143,147,504,506,448,354, r/w 149 , ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಗುರುವಾಯನಕೆರೆ ಐವರು ವಿದ್ಯಾರ್ಥಿಗಳಿಗೆ ಸೈಕಲ್ ಕೊಡುಗೆ ನೀಡಿದ ಉದ್ಯಮಿ ಉಮರ್ ಜಿ.ಕೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಕೊಯ್ಯೂರು: ‘ಭೀಮ್ ರಮಾ’ ಬಳಗದಿಂದ ಶಾಲೆಗಳಿಗೆ ‘ಸಂವಿಧಾನ ಪೀಠಿಕೆ’ ಹಸ್ತಾಂತರ

Suddi Udaya

ಬೆಳ್ತಂಗಡಿ ಟೀಚರ್ಸ್ ಬ್ಯಾಂಕ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಎಸ್‌.ಡಿ.ಎಂ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಎದುರು ಗಂಟೆ ಮಂಟಪದ ಶಿಲಾನ್ಯಾಸ

Suddi Udaya
error: Content is protected !!